2026-06-08 01:25:35

Chamak Beauty special wish for Kannada cinema|ಕನ್ನಡ ಸಿನಿಮಾಕ್ಕೆ ಚಮಕ್ ಬ್ಯೂಟಿಯ ಸ್ಪೆಷಲ್ ವಿಶ್‌|Speed News Kannada

Chamak Beauty special wish for Kannada cinema|ಕನ್ನಡ ಸಿನಿಮಾಕ್ಕೆ ಚಮಕ್ ಬ್ಯೂಟಿಯ ಸ್ಪೆಷಲ್ ವಿಶ್‌|Speed News Kannada

ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳು  ಬರುತ್ತಲೇ ಇದೆ. ದೊಡ್ಡ ಸ್ಟಾರ್ ನಟರ ಸಿನಿಮಾಗಳು ಕೂಡಾ ರಿಲೀಸ್ ಆಗುತ್ತಲೇ ಇವೆ. ತಮ್ಮ ಮದುವೆ , ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಇತ್ತೀಚೆಗೆ ಕನ್ನಡ ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕನ್ನಡ ಸಿನಿಮಾಗಳ ಬಗ್ಗೆ ಮಾತೇ ಆಡದ ರಶ್ಮಿಕಾ ರೀಸೆಂಟ್ ಟ್ವೀಟ್ ವೈರಲ್ ಆಗಿದೆ. ಈ ಟ್ವೀಟ್‌ನಲ್ಲಿ ಅವರು ಕನ್ನಡ ಸಿನಿಮಾಗೆ ಶುಭ ಹಾರೈಸಿದ್ದಾರೆ.ಬಗೆದಷ್ಟು ಬಾಂಧವ್ಯ ಮೊಗೆದಷ್ಟೂ ರಸಕಾವ್ಯ ಸವಿಯೋಣ ಬಾ ಶೃಂಗಾರ ಇಟ್ಟಷ್ಟು ಚುಕ್ಕಿಯ ಎಳೆದಷ್ಟು ರೇಖೆಯ ರಂಗೋಲಿ ಈ ವಯ್ಯಾರ ನೋಡಿ ಹಂಚಿ ಹರಸಿ ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದರು. ಈ ಸಿನಿಮಾದ ಒಂದು ಹಾಡು ರಿಲೀಸ್ ಆಗಿದೆ ಎನ್ನುವ ಪೋಸ್ಟರ್ ಕೂಡಾ ಅಪ್ಲೋಡ್ ಮಾಡಿದ್ದರು. ಇದನ್ನು ಶೇರ್ ಮಾಡಿದ ನಟಿ ರಶ್ಮಿಕಾ ಮಂದಣ್ಣ ಅವರು ಮೋಡ ಕವಿದ ವಾತಾವರಣ ಸಿನಿಮಾ ತಂಡಕ್ಕೆ ಶುಭವಾಗಲಿ ಎಂದು ಸಿಂಪಲ್ ಸುನಿ ಅವರನ್ನು ಟ್ಯಾಗ್ ಮಾಡಿ ರೆಡ್ ಹಾರ್ಟ್ ಎಮೋಜಿ ಹಾಕಿದ್ದಾರೆ.

ಸಿಂಪಲ್ ಸುನಿ ಮೋಡ ಕವಿದ ವಾತಾವರಣ ಅನ್ನೋ ಸಿನಿಮಾ ಮಾಡಿದ್ದಾರೆ. ಇದರ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಚಿತ್ರ ಇದೇ ವರ್ಷ ರಿಲೀಸ್ ಆಗುತ್ತಿದೆ. ಮುಂದಿನ ಜೂನ್ ತಿಂಗಳ 26 ರಂದು ಈ ಚಿತ್ರ ತೆರೆಗೆ ಬರ್ತಿದೆ. ಈ ವಿಷಯನ್ನ ಅಧಿಕೃತವಾಗಿಯೇ ಈಗ ಹೇಳಲಾಗಿದೆ. ಸಿಂಪಲ್ ಸುನಿ ಡೈರೆಕ್ಷನ್ ಅಲ್ಲಿ ಬರೋ ಸಿನಿಮಾಗಳು ಚೆನ್ನಾಗಿರುತ್ತವೆ. ಕಥೆಗಳ ಮೇಲೆ ಸಾಕಷ್ಟು ವರ್ಕ್ ಮಾಡಿರುತ್ತಾರೆ. ಚಮಕ್ ಚಿತ್ರದ ಕಥೆ ಚೆನ್ನಾಗಿತ್ತು. ಒಂದು ಸರಳ ಪ್ರೇಮ ಕಥೆ ಅದ್ಭುತವಾಗಿಯೇ ಇತ್ತು. ಈ ಹಿಂದಿನ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರ ರಕ್ಷಿತ್ ಶೆಟ್ರ ಸಿನಿಮಾ ಕರಿಯರ್ ಲಿಫ್ಟ್ ಮಾಡಿತು. ಈ ಚಿತ್ರವನ್ನ ಒಂದು ಸರಳ ಪ್ರೇಮ ಕಥೆ ಚಿತ್ರ ನಿರ್ಮಿಸಿದ ರಾಮ್ ಮೂವೀಸ್ ಅವರೇ ಪ್ರೊಡ್ಯೂಸ್ ಮಾಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾವರ್ಕ್ ಮಾಡಿದ್ದಾರೆ. ಜೂಡಾ ಸ್ಯಾಂಡಿ ಮ್ಯೂಸಿಕ್ ಮಾಡಿದ್ದಾರೆ. ಈ ಚಿತ್ರದ ಒಂದು ಹಾಡನ್ನ ಸಂಜಿತ್ ಹೆಗಡೆ ಹಾಡಿದ್ದಾರೆ. "ನನ್ನೆದೆಯ ಹಾಡೊಂದನು" ಅನ್ನೋ ಈ ಗೀತೆ ಜನರಿಗೆ ಇಷ್ಟ ಆಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.