2026-06-08 06:47:02

Central clarification on LPG gas booking period | ಎಲ್‌ಪಿಜಿ ಗ್ಯಾಸ್‌ ಬುಕ್ಕಿಂಗ್‌ ಅವಧಿ ಬಗ್ಗೆ ಕೇಂದ್ರ ಸ್ಪಷ್ಟನೆ | Speed news kannada

Central clarification on LPG gas booking period | ಎಲ್‌ಪಿಜಿ ಗ್ಯಾಸ್‌ ಬುಕ್ಕಿಂಗ್‌ ಅವಧಿ ಬಗ್ಗೆ ಕೇಂದ್ರ ಸ್ಪಷ್ಟನೆ | Speed news kannada

ಎಲ್‌ಪಿಜಿ ಗ್ಯಾಸ್‌  ಬದಲಾವಣೆಯಲ್ಲಿ ಬದಲಾವಣೆಯಾಗಿದೆ ಎಂದು ಗ್ಯಾಸ್‌ ಇನ್ನು ಸಿಗಲ್ಲ ಎಂಬ ನಿರೀಕ್ಷೆಯಲ್ಲಿ ಗ್ರಾಹಕರು ಅಧಿಕೃತವಾಗಿ ಗ್ಯಾಸ್‌ಗಳನ್ನು ಬುಕ್‌ ಮಾಡುತ್ತಿದ್ದರು, ಇದೀಗ ಕೇಂದ್ರ ಸರ್ಕಾರ ಗ್ಯಾಸ್‌ ಬುಕ್ಕಿಂಗ್‌ ಅವಧಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ನಗರ ಪ್ರದೇಶಕ್ಕೆ 25 ದಿನ ಹಾಗೂ ಗ್ರಾಮೀಣ ಭಾಗಕ್ಕೆ 45 ದಿನ ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ದಯವಿಟ್ಟು ಅಧಿಕೃತವಾಗಿ ಕಂಪನಿಗಳಿಂದ ಬರುವ ಮಾಹಿತಿಗಳ ಮೇಲೆ ಗಮನಹರಿಸಿ. ಗಾಬರಿಯಲ್ಲಿ ಗ್ಯಾಸ್ ಬುಕ್ ಮಾಡಬೇಡಿ ಎಂದು ಇಂಡಿಯನ್ ಆಯಿಲ್ ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದೆ. ಎಲ್‌ಪಿಜಿ ರಿಫೀಲ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆಗಳಾಗಿವೆ ಎಂಬ ವರದಿಗಳು ತಪ್ಪಾಗಿವೆ. ಸದ್ಯ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ದೇಶಾದ್ಯಂತ ಎಲ್‌ಪಿಜಿ ಸರಬರಾಜಿನಲ್ಲಿಯೂ ಯಾವುದೇ ಸಮಸ್ಯೆ ಇಲ್ಲ. ಸ್ಟಾಕ್ ಇದೆ ಎಂದು ತಿಳಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.