2026-07-23 07:39:49

CCL | Kichha Sudeep | ಸಿಸಿಎಲ್ ಗ್ರೌಂಡ್ ನಲ್ಲಿ ಮಗಳ ಹಾಡಿಗೆ ಸುದೀಪ್ ಸ್ಟೆಪ್ಸ್ , ಮೈದಾನದಲ್ಲಿ ಕಿಚ್ಚನ ಹವಾ..! | Speed News Kannada

CCL | Kichha Sudeep | ಸಿಸಿಎಲ್ ಗ್ರೌಂಡ್ ನಲ್ಲಿ ಮಗಳ ಹಾಡಿಗೆ ಸುದೀಪ್ ಸ್ಟೆಪ್ಸ್ , ಮೈದಾನದಲ್ಲಿ ಕಿಚ್ಚನ ಹವಾ..! | Speed News Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತನ್ನ ಅಬ್ಬರ ಮುಂದುವರೆಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಮಣಿಸಿ ಗೆಲುವಿನ ನಗೆ ಬೀರಿದೆ. ಮಧುರೈನಲ್ಲಿ ನಡೆದ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ತ ಕಿಚ್ಚ ಸುದೀಪ್. ಹೌದು ಗ್ರೌಂಡ್ ಹೊರಗೆ ಕಿಚ್ಚ ಸುದೀಪ್ ಭರ್ಜರಿ ಡಾನ್ಸ್ ಮಾಡಿದ್ದಾರೆ. ಮಾರ್ಕ್ ಸಿನಿಮಾದ ಮಗಳೇ ಹಾಡಿರುವ ಐಟಂ ಸಾಂಗ್ ಗೆ ಸುದೀಪ್ ಸ್ಟೆಪ್ ಹಾಕಿದ್ದಾರೆ. ಸಾನ್ವಿ ಸುದೀಪ್ ಕೂಡ ಮೈದಾನಕ್ಕೆ ಬಂದಿದ್ದು, ಪಂದ್ಯದ ಕೊನೆಯವರೆಗೂ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಒಂದ್ಕಡೆ ಅವರು ಮಸ್ತ್ ಮಲೈಕಾ ಹಾಡನ್ನು ಹಾಡ್ತಿದ್ರೆ ಸುದೀಪ್ ಡಾನ್ಸ್ ಮಾಡ್ತಿದ್ರು.

ಗೆಲುವು ಸಂಭ್ರಮಿಸಿದ ಸುದೀಪ್ ಮಗಳು  ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಈವರೆಗೆ ಎರಡು ಪಂದ್ಯಗಳನ್ನು ಆಡಿದೆ. ಎರಡೂ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಜನವರಿ 23 ರಂದು ನಡೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಕರ್ನಾಟಕ ಬುಲ್ದೋಜರ್ಸ್ ಮಣಿಸಿದೆ. ಗೆಲುವನ್ನು ಕಿಚ್ಚ ಸುದೀಪ್ ಮಗಳು ಸಾನ್ವಿ ಜೊತೆ ಸಂಭ್ರಮಿಸಿದ್ದಾರೆ.

ಕರ್ನಾಟಕ ಬುಲ್ಡೋಜರ್ ತನ್ನ ಮೊದಲ ಪಂದ್ಯವನ್ನು ಪಂಜಾಬ್ ದಿ ಶೇರ್ ಜೊತೆ ಆಡಿತ್ತು. 31 ರನ್ ಗಳ ಜಯ ಸಾಧಿಸಿತ್ತು. ನಿನ್ನೆ ನಡೆದ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ಉತ್ತಮ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು. ತೆಲುಗು ವಾರಿಯರ್ಸ್ ನೀಡಿದ 227 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಕರ್ನಾಟಕ ಬುಲ್ಡೋಜರ್ಸ್ ಸುಲಭ ಜಯ ಸಾಧಿಸಿದೆ. ಇನ್ನೂ ಎರಡು ಓವರ್ ನಾಲ್ಕು ಬಾಲ್ ಬಾಕಿ ಇರುವಾಗ್ಲೇ ಕರ್ನಾಟಕ ಬುಲ್ದೋಜರ್ಸ್ ಗೆಲುವು ಸಾಧಿಸಿತ್ತು. ರಾಜೀವ್ ಶತಕ ತಂಡಕ್ಕೆ ದೊಡ್ಡ ಬಲ ನೀಡಿತ್ತು. ಎರಡು ಬಾರಿ ಕಿಚ್ಚ ಸುದೀಪ್ ತಂಡ ಸಿಸಿಎಲ್ ಕಪ್ ಎತ್ತಿ ಹಿಡಿದಿದೆ. ಆದ್ರೆ ಕೆಲ ವರ್ಷಗಳಿಂದ ಕಪ್ ನಮ್ಮ ಕೈಸೇರಿಲ್ಲ. ಈ ಬಾರಿ ಕಪ್ ಗೆಲ್ಲುವ ಮಹದಾಸೆಯಲ್ಲಿ ತಂಡವಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.