2026-05-06 08:29:55

Bullet Holes | ವಿನಾಶದ ನಡುವೆ ಅರಳಿದ ಕಲೆ ಗುಂಡಿನ ಗುರುತುಗಳಿಗೆ ಜೀವ ತುಂಬಿದ ಇರಾಕ್ ಕಲಾವಿದ | Speed News Kannada

Bullet Holes | ವಿನಾಶದ ನಡುವೆ ಅರಳಿದ ಕಲೆ ಗುಂಡಿನ ಗುರುತುಗಳಿಗೆ ಜೀವ ತುಂಬಿದ ಇರಾಕ್ ಕಲಾವಿದ | Speed News Kannada

ಬಾಗ್ದಾದ್: ಯುದ್ದ ಮತ್ತು ಸಂಘರ್ಷದಿಂದ ಉಂಟಾದ ಗುಂಡಿನ ಕಲೆಗಳನ್ನು ಸೃಜನಶೀಲ ಕಲಾಕೃತಿಗಳನ್ನಾಗಿ ಪರಿವರ್ತಿಸುವ ಮೂಲಕ ಇರಾಕಿನ ಕಲಾವಿದ ಮೊಖಲ್ಲಾದ್ ಹಬೀಬ್ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ವರ್ಷಗಳ ಕಾಲ ಯುದ್ಧ ಮತ್ತು ಸಂಘರ್ಷಗಳಿಂದ ನಲುಗಿರುವ ಇರಾಕ್‌ನಲ್ಲಿ ಗೋಡೆಗಳ ಮೇಲಿರುವ ಬಂದೂಕಿನ ಗುಂಡುಗಳ ಗುರುತುಗಳನ್ನು ಆಕರ್ಷಕ ಕಲಾಕೃತಿಗಳನ್ನಾಗಿ ರಚಿಸುವ ಮೂಲಕ ಶಾಂತಿ ಮತ್ತು ಭರವಸೆಯ ಸಂದೇಶ ಸಾರುತ್ತಿದ್ದಾರೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಬೀಬ್ ಅವರ ಕಲಾಕೃತಿಗಳು ವೈರಲ್ ಆಗುತ್ತಿದ್ದಂತೆ ಇವರ ಜನಪ್ರಿಯತೆಯೂ ಹೆಚ್ಚತೊಡಗಿತು, ನೋವಿನ ನೆನಪುಗಳಿಗೆ ಕಲಾಸ್ಪರ್ಶ ಇರಾಕಿನಲ್ಲಿ ಯುದ್ಧದ ಅವಶೇಷಗಳು ಕೇವಲ ನೆನಪುಗಳಲ್ಲ, ಅವು ಅಲ್ಲಿನ ಜನರ ದೈನಂದಿನ ಜೀವನದ ಭಾಗವಾಗಿವೆ. ಗುಂಡಿನ ರಂಧ್ರಗಳಿಂದ ಕೂಡಿದ ಗೋಡೆಗಳು, ಒಡೆದ ಕಿಟಕಿಗಳು ಮತ್ತು ಹಾನಿಗೊಳಗಾದ ಕಟ್ಟಡಗಳು ವರ್ಷಗಳ ಸಂಘರ್ಷದ ಕಹಿ ನೆನಪನ್ನು ಸ್ಮರಿಸುತ್ತವೆ. ಈ ಕಲೆಗಳನ್ನು ಜನರು ನಿರ್ಲಕ್ಷಿಸುವ ಬದಲು ಹೊಸ ದೃಷ್ಟಿಕೋನದಿಂದ ನೋಡುವಂತೆ ಹಬೀಬ್ ಪ್ರೇರೇಪಿಸುತ್ತಿದ್ದಾರೆ.
ಬಂದೂಕಿನ ಗುಂಡಿನ ದಾಳಿಯಿಂದ ಗೋಡೆಗಳ ಮೇಲೆ ಉಂಟಾದ ರಂಧ್ರವನ್ನು ಹೂವುಗಳು, ಪಕ್ಷಿಗಳು ಅಥವಾ ಕಾರ್ಟೂನ್ ಪಾತ್ರಗಳನ್ನಾಗಿ ಪರಿವರ್ತಿಸುತ್ತಾರೆ. ಪ್ರಸ್ತುತ ಇನ್ಸಾಗ್ರಾಮ್‌ನಲ್ಲಿ ಹಬೀಬ್ ಅವರ ಕಲೆಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ವಿನಾಶದಿಂದ ಅರ್ಥಪೂರ್ಣವಾದುದನ್ನು ಸೃಷ್ಟಿಸುವ ಇವರ ಕಲೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.