2026-03-07 12:27:52

Buffalo Plastic Surgery and Glove Ivy the secrets to Janhvis beauty | ಬಫೆಲ್ಲೊ ಪ್ಲಾಸ್ಟಿ ಗ್ಲೋವ್ ಐವಿ ಜಾನವಿ ಅಂದದ ರಹಸ್ಯಗಳು ಒಂದೆರಡಾ | Speed News kannada

Buffalo Plastic Surgery and Glove Ivy the secrets to Janhvis beauty | ಬಫೆಲ್ಲೊ ಪ್ಲಾಸ್ಟಿ ಗ್ಲೋವ್ ಐವಿ ಜಾನವಿ ಅಂದದ ರಹಸ್ಯಗಳು ಒಂದೆರಡಾ | Speed News kannada

ಜಾನವಿ ಕಪೂರ್‌ ಬಾಲಿವುಡ್‌ನ ಸ್ಟಾರ್ ಯುವ ನಟಿ. ಶ್ರೀದೇವಿ ಮತ್ತು ಬೋನಿ ಕಪೂರ್ ಪುತ್ರಿಯಾದ ಜಾನ್ಹವಿ ತಮ್ಮ ಅಂದ ಮತ್ತು ಗ್ರಾಮರ್‌ನಿಂದ ಬಾಲಿವುಡ್‌ನಲ್ಲಿ ಅವಕಾಶಗಳ ಮೇಲೆ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಆದರೆ ಜಾನ್ಯವಿಯ ಈ ಅಂದ ಮತ್ತು ಗ್ಲಾಮರ್ ಎಲ್ಲವೂ ನಿಜವಾದುದಲ್ಲ ಕೃತಕವಾದುದು ಎಂಬ ಟೀಕೆಗಳು ಆಗಾಗ್ಗೆ ವ್ಯಕ್ತವಾಗುತ್ತಿರುತ್ತದೆ.
ಜಾನವಿ ಕಪೂರ್ ಅವರು ಕೆಲವು ಪ್ಲಾಸ್ಟಿಕ್ ಸರ್ಜರಿ ಮತ್ತು ಕೆಲವು ಕೃತಕ ವೈದ್ಯಕೀಯ ಪ್ರಕ್ರಿಯೆಗಳ ಮೂಲಕ ತಮ್ಮ ಅಂದವನ್ನು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಅಂಗಾಂಗಳನ್ನು ಉಬ್ಬಿಸಿ ಕೆಲವೆಡೆ ತಗ್ಗಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕೆಲ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ಕೆಲ ವಾರಗಳ ಹಿಂದೆ ಜಾನವಿ ಕಪೂರ್ ಐವಿ ಡ್ರಿಪ್ ಹಾಕಿಸಿಕೊಂಡೇ ಮೇಕಪ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಸ್ವತಃ ಜಾನವಿ ಸಹ ಐವಿ ಡ್ರಿಪ್ ಹಾಕಿಸಿಕೊಳ್ಳುತ್ತಿರುವ ಚಿತ್ರ ಹಂಚಿಕೊಂಡಿದ್ದರು. ಕೆಲ ವರದಿಗಳ ಪ್ರಕಾರ ಜಾನವಿ ಹಾಕಿಸಿಕೊಳ್ಳುತ್ತಿರುವುದು ಗೋವಿಂಗ್ ಐವಿ ಡ್ರಿಪ್. ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ, ತ್ವಚೆ ನುಣುಪಾಗುತ್ತದೆ ಅಂದ ಹೆಚ್ಚುತದೆಯಂತೆ. ಜಾನವಿ ಮಾತ್ರವೇ ಅಲ್ಲದೆ ಇನ್ನೂ ಕೆಲವು ಬಾಲಿವುಡ್ ಮತ್ತು ಕೆಲ ಹಾಲಿವುಡ್ ನಟಿಯರು ಸಹ ಈ ಐವಿ ಮಾದರಿಯನ್ನು ಬಳಸುತ್ತಾರೆ.
ಕೆಲ ತಿಂಗಳುಗಳ ಹಿಂದೆ ವೈರಲ್ ಆಗಿದ್ದ ವಿಡಿಯೋ ಒಂದರಲ್ಲಿ ನಟಿ ಜಾನವಿ ಕಪೂರ್ 'ಬಫೆಲ್ಲೊ ಪ್ಲಾಸ್ಟಿ' ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಜಾನವಿಯೇ ಕಾರ್ಯಕ್ರಮವೊಂದರಲ್ಲಿ ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ತಾವು ಬಫೆಲ್ಲೊ ಪ್ಲಾಸ್ಟಿ ಮಾಡಿಸಿಕೊಂಡಿಲ್ಲ ಎಂದರು. ಆದರೆ ಅಂದ ಹೆಚ್ಚಿಸಿಕೊಳ್ಳಲು ಬೇರೆ ಕೆಲವು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವುದಾಗಿಯೂ ಅವರು ಹೇಳಿದರು. ಪ್ಲಾಸ್ಟಿಕ್ ಸರ್ಜರಿಗಳ ಬಗ್ಗೆ ಪಾರದರ್ಶಕತೆ ಇರಬೇಕು ಎಂದ ಜಾನ್ಯವಿ, ಸೌಂದರ್ಯವರ್ಧಕ ಚಿಕಿತ್ಸೆಗಳ ಕುರಿತು ಪಾರದರ್ಶಕತೆಯ ಮಹತ್ವವನ್ನು ಜಾನ್ವಿ ಕಪೂರ್ ಒತ್ತಿ ಹೇಳಿದರು, “ನಾನು ಮುಚ್ಚುಮರೆಯಲ್ಲಿ ನಂಬಿಕೆ ಇಡುವುದಿಲ್ಲ” ನಾನು ಆ ವಿಷಯದಲ್ಲಿ 'ಬುದ್ದಿವಂತ, ಸಂಪ್ರದಾಯವಾದಿ ಮತ್ತು ಸರಿಯಾದ' ನಿರ್ಣಯಗಳನ್ನು ತೆಗೆದುಕೊಂಡಿದ್ದೀನಿ. ನನಗೆ ನನ್ನ ತಾಯಿಯ ಮಾರ್ಗದರ್ಶನ ಸರಿಯಾದ ಸಲಹೆಗಳು ಸಹ ನೆರವಾದವು' ಎಂದಿದ್ದಾರೆ.
ಆ ಮೂಲಕ ತಾವು ಚಿತ್ರರಂಗಕ್ಕೆ ಕಾಲಿಡುವ ಮುಂಚೆಯೇ ತಾವು ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿರುವ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ. ಜಾನವಿ ಕಪೂರ್ ಪ್ರಸ್ತುತ ತೆಲುಗಿನ 'ಪೆದ್ದಿ' ಸಿನಿಮಾನಲ್ಲಿ ರಾಮ್ ಚರಣ್ ಜೊತೆಗೆ ನಟಿಸಿದ್ದಾರೆ. ಅದಾದ ಬಳಿಕ 'ದೇವರ 2'ನಲ್ಲಿ ನಟಿಸಲಿದ್ದಾರೆ. ಹಿಂದಿಯಲ್ಲಿ ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳನ್ನು ಜಾನವಿ ಒಪ್ಪಿಕೊಂಡಂತಿಲ್ಲ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.