2026-06-08 01:23:33

Budget Presentation on March 6 | ಮಾರ್ಚ್‌ 6 ರಂದು ಬಜೆಟ್‌ ಮಂಡನೆ ದಾಖಲೆ ನಿರ್ಮಿಸಲಿರುವ ಸಿಎಂ ಸಿದ್ದರಾಮಯ್ಯ | Speed News Kannada

Budget Presentation on March 6  | ಮಾರ್ಚ್‌ 6 ರಂದು ಬಜೆಟ್‌ ಮಂಡನೆ ದಾಖಲೆ ನಿರ್ಮಿಸಲಿರುವ ಸಿಎಂ ಸಿದ್ದರಾಮಯ್ಯ | Speed News Kannada

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ, ತಮ್ಮ 17ನೇ ಬಜೆಟ್‌ ಅನ್ನು ಮಾರ್ಚ್‌ 6 ರಂದು ಮಂಡಿಸಲಿದ್ದಾರೆ. ಬಜೆಟ್‌ ಅಧಿವೇಶನ ಮಾರ್ಚ್‌ 27ರವರೆಗೆ ಒಟ್ಟು 14 ದಿನಗಳು ನಡೆಯಲಿದೆ..
ದಾಖಲೆಯ ಬಜೆಟ್ ಮಂಡಿಸಲಿರುವ ಸಿಎಂ:
ಹಣಕಾಸು ಖಾತೆಯನ್ನು ಹೊಂದಿರುವ ಸಿ. ಎಂ. ಸಿದ್ದರಾಮಯ್ಯ ಅವರು ಪ್ರಸಕ್ತ  ಸಾಲಿನ ಬಜೆಟ್ ಮಂಡಿಸಲು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಪ್ರತಿದಿನವೂ ಹಲವು ಇಲಖೆಗಲ ಜತೆ ಸಭೆ ನಡೆಸುತ್ತಿದ್ದಾರೆ. ಸಂಘಸಂಸ್ಥೆಗಳಿಂದಲೂ ಅವರು ಮನವಿಗಳನ್ನು ಸ್ವೀಕರಿಸುತ್ತಿದ್ದಾರೆ. ನಡೆಸುತ್ತಿದ್ದಾರೆ. 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಭಾಜನರಾಗಲಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ  ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸುದ್ದಿಗೋಷ್ಠಿ ನಡೆಸಿ ವಿವರ ಹಂಚಿಕೊಂಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.