2026-06-25 02:10:32

Brutal murder of an elderly woman | ನೆಲಮಂಗಲದಲ್ಲಿ ವೃದ್ಧೆಯ ಭೀಕರ ಕೊಲೆ ಒಂದು ಗಂಟೆ 3 ನಿಮಿಷದಲ್ಲಿ ಕೃತ್ಯ ಆರೋಪಿ ಬಂಧನ | Speed News Kannada

Brutal murder of an elderly woman | ನೆಲಮಂಗಲದಲ್ಲಿ ವೃದ್ಧೆಯ ಭೀಕರ ಕೊಲೆ ಒಂದು ಗಂಟೆ 3 ನಿಮಿಷದಲ್ಲಿ ಕೃತ್ಯ ಆರೋಪಿ ಬಂಧನ | Speed News Kannada

ನೀರು ಕೇಳುವ ನೆಪದಲ್ಲಿ ಅರೋಪಿಯೋರ್ವ ಮನೆಗೆ ನುಗ್ಗಿ ವೀಲ್ ಚೇರ್‌ನಲ್ಲಿದ್ದ ವೃದ್ಧ ಪತಿಯ ಕಣ್ಣೆದುರೇ ಮಹಿಳೆಯ ಕತ್ತು ಸೀಳಿ ಕೊಲೆ (Crime) ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿರುವ ಆಘಾತಕಾರಿ ಘಟನೆ ನೆಲಮಂಗಲದ ಪೇಟೆ ಬೀದಿಯಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಶೋಭಾ (60) ಎಂದು ಗುರುತಿಸಲಾಗಿದೆ. ಮೃತ ಶೋಭಾ ನೆಲಮಂಗಲದ ಪೇಟೆ ಬೀದಿಯಲ್ಲಿ ತಮ್ಮ ಪತಿಯೊಂದಿಗೆ ವಾಸವಾಗಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಪತಿಯೂ 12 ವರ್ಷಗಳ ಹಿಂದೆ ಬೈನ್ ಸ್ಟೋಕ್ ಆಗಿ ಹಾಸಿಗೆ ಹಿಡಿದ್ದರು.
ಮಕ್ಕಳಿಲ್ಲದ ಕಾರಣ ಮನೆಯ ಸಂಪೂರ್ಣ ಜವಾಬ್ದಾರಿ ಶೋಭಾ ಅವರ ಮೇಲಿತ್ತು, ಅನಾರೋಗ್ಯ ಪೀಡಿತ ಪತಿಯನ್ನು ಮಗುವಿನಂತೆ ಆರೈಕೆ ಮಾಡುವ ಜೊತೆಗೆ ಸುತ್ತಮುತ್ತಲಿನ ನಿವಾಸಿಗಳ ಜೊತೆಗೂ ಅನ್ನೋನ್ಯವಾಗಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲದೆ, ದಂಪತಿಗಳು ಶ್ರೀಮಂತರಾಗಿದ್ದು, ಶೋಭಾ ಅವರ ಪತಿಗೆ ಫಿಸಿಯೋಥೆರಪಿ ಮಾಡಲು ಪ್ರತಿದಿನ ವೈದ್ಯರು ಮನೆಗೆ ಬರುತ್ತಿದ್ದರು. ಎಂದಿನಂತೆ ನಿನ್ನೆಯೂ ಅವರು ಬಂದ ವೇಳೆ ಕೊಲೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಇನ್ನು ಈ ಘಟನೆ ಸಂಜೆ 4 ಗಂಟೆ ಸರಿಸುಮಾರಿಗೆ ಪೇಟೆ ಬೀದಿಯಿಂದ ಮನೆಗೆ ಶೋಭಾ ಅವರು ಬರುತ್ತಿರುವಾಗ ಆರೋಪಿ ಅದನ್ನು ಗಮನಿಸಿದ್ದಾನೆ. ಈ ವೇಳೆ ಅವನ ಕಣ್ಣಿಗೆ 100 ಗ್ರಾಂಗಳಿಗೂ ಹೆಚ್ಚು ತೂಕದ ಒಡವೆ ಆರೋಪಿ ಕಣ್ಣಿಗೆ ಬಿದ್ದಿದೆ.
ಕೂಡಲೇ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ, ಮನೆಯ ಬಳಿ ಬರುತ್ತಿದ್ದಂತೆ ನೀರು ಕೇಳುವ ನೆಪದಲ್ಲಿ ಮಾತಾಡಿದ್ದಾನೆ, ಈ ವೇಳೆ ನೀರು ತರಲೆಂದು ಒಳಗೆ ಹೋಗುತ್ತಿದ್ದಂತೆ ಹಿಂದಿನಿಂದ ಬಂದ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಶೋಭಾರ ಕತ್ತು ಸೀಳಿದ್ದಾನೆ.
ಬಳಿಕ ಶೋಭಾರ ಮೈಮೇಲಿದ್ದ ಚಿನ್ನಾಭರಣವನ್ನು ಆರೋಪಿ ದೋಚಿ ಎಸ್ಕೆಪ್ ಆಗಿದ್ದಾನೆ. ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಹೋಲ್‌ ಸೇಲ್ ಅಂಗಡಿ ಮಾಲೀಕ ಶಿವಕುಮಾರ್ (35) ಎಂದು ಗುರುತಿಸಲಾಗಿದೆ. 8 ಲಕ್ಷ ರೂ. ಸಾಲ ತೀರಿಸಲು ಹಣದ ಅಗತ್ಯವಿದ್ದ ಹಿನ್ನೆಲೆಯಲ್ಲಿ ವೃದ್ದೆಯನ್ನು ಟಾರ್ಗೆಟ್ ಮಾಡಿಕೊಂಡು ಆರೋಪಿ ಕೃತ್ಯ ಎಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಅನುಮಾನನುಮಾನ ಬಾರದಂತೆ ತನ್ನ ಅಕ್ಟಿವಾ ವಾಹನದಲ್ಲಿ ಮನೆ ಸೇರಿದ್ದ ಶಿವಕುಮಾರ್, ಬಳಿಕ ಅಕ್ಷ್ಮೀವಾ ನಂಬರ್ ಟ್ರೇಸ್ ಮಾಡಿದ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಬೈಕ್, ಚಾಕು ಹಾಗೂ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.