ಗುಜರಾತ್‌ನಲ್ಲಿ ಮಾಟಮಂತ್ರದ ಸಂಶಯದಿಂದ ಅಣ್ಣನೊಬ್ಬ ತನ್ನ ತಮ್ಮನನ್ನು ಹರಿತವಾದ ಆಯುಧದಿಂದ ಗಂಟಲು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.ಮೃತ ವ್ಯಕ್ತಿಯನ್ನು ಗುರ್ಜಿ ವಾಸವ ಎಂದು ಗುರುತಿಸಲಾಗಿದೆ. ತಂದೆಯನ್ನು ರಕ್ಷಿಸಲು ಬಂದ ಪುತ್ರಿಯರಾದ ಸಾವಿತ್ರಿ ಮತ್ತು ಶಿಲ್ಪಾ ಮೇಲೂ ಆರೋಪಿ ಹಲ್ಲೆ ನಡೆಸಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ರಮೇಶ್ ವಾಸವ ಎಂಬಾತನೇ ಈ ಕೃತ್ಯದ ಆರೋಪಿ. ಆತ ಈಗಾಗಲೇ 2005ರಲ್ಲಿ ತನ್ನ ಮತ್ತೊಬ್ಬ ಸಹೋದರ ವಿಠ್ಠಲ್ ವಾಸವನನ್ನು ಕೊಲೆ ಮಾಡಿದ್ದ ಹಿನ್ನೆಲೆ ಹೊಂದಿದ್ದಾನೆ.ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕುಟುಂಬದ ಕಲಹ ಮತ್ತು ಮಾಟಮಂತ್ರದ ಮೂಢನಂಬಿಕೆಯೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.