2026-03-07 05:03:02

Britain joins US in Iran | ಇರಾನ್ ವಿರುದ್ಧ ಅಮೇರಿಕಾಕ್ಕೆ ಬ್ರಿಟನ್ ಸಾಥ್ ಬ್ರಿಟಿಷ್ ಸೇನಾ ನೆಲೆಗಳ ಬಳಕೆಗೆ ಸ್ಮಾರ್ಮರ್ ಗ್ರೀನ್ ಸಿಗ್ನಲ್ | Speed News Kannada

Britain joins US in Iran | ಇರಾನ್ ವಿರುದ್ಧ ಅಮೇರಿಕಾಕ್ಕೆ ಬ್ರಿಟನ್ ಸಾಥ್ ಬ್ರಿಟಿಷ್ ಸೇನಾ ನೆಲೆಗಳ ಬಳಕೆಗೆ ಸ್ಮಾರ್ಮರ್ ಗ್ರೀನ್ ಸಿಗ್ನಲ್ | Speed News Kannada

ಲಂಡನ್:ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ, ಬ್ರಿಟನ್ ಸರ್ಕಾರವು ಅಮೆರಿಕಕ್ಕೆ ಒಂದು ಮಹತ್ವದ ರಾಜತಾಂತ್ರಿಕ ಮತ್ತು ಮಿಲಿಟರಿ ಬೆಂಬಲವನ್ನು ಘೋಷಿಸಿದೆ. ಇರಾನ್‌ನಿಂದ ಎದುರಾಗಬಹುದಾದ ಸಂಭಾವ್ಯ ಕ್ಷಿಪಣಿ ದಾಳಿಗಳನ್ನು ತಡೆಯಲು ಮತ್ತು ರಕ್ಷಣಾತ್ಮಕ ಕಾರ್ಯಾಚರಣೆ ನಡೆಸಲು ಅಮೆರಿಕದ ಪಡೆಗಳು ಬ್ರಿಟಿಷ್ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಪ್ರಧಾನಿ ಕೀರ್ ಸ್ಟಾರ್ಮರ್ ನೇತೃತ್ವದ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
'ಸೀಮಿತ ರಕ್ಷಣಾತ್ಮಕ ಉದ್ದೇಶ'ಕ್ಕೆ ಮಾತ್ರ ಅವಕಾಶ ಬ್ರಿಟನ್ ಈ ಅನುಮತಿಯನ್ನು ನೀಡುವಾಗ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಈ ಮಿಲಿಟರಿ ನೆಲೆಗಳನ್ನು ಕೇವಲ "ಸೀಮಿತ ರಕ್ಷಣಾತ್ಮಕ ಉದ್ದೇಶಗಳಿಗಾಗಿ" ಮಾತ್ರ ಬಳಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ. ಅಂದರೆ, ಇರಾನ್‌ ನಿಂದ ಉಡಾವಣೆಯಾಗುವ ಕ್ಷಿಪಣಿಗಳನ್ನು ತಡೆಯಲು ಅಥವಾ ಹತ್ತಿಕ್ಕಲು ಮಾತ್ರ ಅಮೆರಿಕ ಈ ನೆಲೆಗಳನ್ನು ಬಳಸಬಹುದಾಗಿದ್ದು, ಇರಾನ್ ಮೇಲೆ ನೇರ ಆಕ್ರಮಣಕಾರಿ ಯುದ್ಧ ಸಾರಲು ಇವುಗಳನ್ನು ಬಳಸುವಂತಿಲ್ಲ. 
'ಯಾವ ನೆಲೆಗಳ ಬಳಕೆ?: ಹಿಂದೂ ಮಹಾಸಾಗರದಲ್ಲಿರುವ ಆಯಕಟ್ಟಿನ ಡಿಯಾಗೋ ಗಾರ್ಸಿಯಾ ಮತ್ತು ಇಂಗ್ಲೆಂಡ್‌ನಲ್ಲಿರುವ ಆರ್.ಎ.ಎಫ್ ಫೇರ್‌ಫೋರ್ಡ್ ನಂತಹ ಪ್ರಮುಖ ವಾಯುನೆಲೆಗಳನ್ನು ಅಮೆರಿಕದ ಬಿ-52 (B-52) ಬಾಂಬರ್ ವಿಮಾನಗಳು ಮತ್ತು ಇತರ ಅತ್ಯಾಧುನಿಕ ಯುದ್ಧ ವಿಮಾನಗಳ ಕಾರ್ಯಾಚರಣೆಗೆ ಬಳಸುವ ಸಾಧ್ಯತೆಯಿದೆ.
ಬ್ರಿಟನ್‌ ನಿಲುವು ಬದಲಾವಣೆ: ಈ ಹಿಂದೆ ಬ್ರಿಟನ್ ಇರಾನ್ ವಿರುದ್ಧದ ಕಾರ್ಯಾಚರಣೆಗೆ ತನ್ನ ನೆಲವನ್ನು ಬಿಟ್ಟುಕೊಡಲು ಹಿಂಜರಿಯುತ್ತಿತ್ತು. ಆದರೆ, ಇರಾನ್‌ ಇತ್ತೀಚಿನ ಬೆದರಿಕೆಗಳು ಮತ್ತು ಇಸ್ರೇಲ್ ಮೇಲೆ ನಡೆದ ಸರಣಿ ದಾಳಿಗಳ ಹಿನ್ನೆಲೆಯಲ್ಲಿ ಬ್ರಿಟನ್ ತನ್ನ ನಿಲುವನ್ನು ಬದಲಿಸಿಕೊಂಡಿದೆ ಎನ್ನಲಾಗಿದೆ.
ಅಂತರಾಷ್ಟ್ರೀಯ ಒತ್ತಡ: ಬ್ರಿಟನ್‌ನ ಈ ನಿರ್ಧಾರವು ಅಮೆರಿಕದೊಂದಿಗಿನ 'ವಿಶೇಷ ಸಂಬಂಧ'ವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಆದರೆ, ಇದು ಇರಾನ್ ಮತ್ತು ಅದರ ಮಿತ್ರ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯೂ ಇದೆ.
ಪರಿಣಾಮವೇನು?
ಈ ಬೆಳವಣಿಗೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿಲಿಟರಿ ಸಾಮರ್ಥ್ಯ ಹೆಚ್ಚಾಗಲಿದ್ದು, ಇರಾನ್‌ನ ಕ್ಷಿಪಣಿ ವ್ಯವಸ್ಥೆಯ ಮೇಲೆ ಹದ್ದಿನ ಕಣ್ಣಿಡಲು ಸುಲಭವಾಗಲಿದೆ. ಬ್ರಿಟನ್‌ ಈ ನಡೆಗೆ ಇರಾನ್ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ. ಒಂದು ವೇಳೆ ಇರಾನ್ ಪ್ರತೀಕಾರ ತೀರಿಸಿಕೊಂಡರೆ, ಬ್ರಿಟನ್ ಕೂಡ ನೇರವಾಗಿ ಈ ಸಂಘರ್ಷದಲ್ಲಿ ಭಾಗಿಯಾಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.