2026-07-07 11:24:42

BrahMos missile Purchase | ಬ್ರಹ್ಮೋಸ್ ಕ್ಷಿಪಣಿ ಖರೀದಿ ಭಾರತದ ಜೊತೆ ಹಲವು ಒಪ್ಪಂದಕ್ಕೆ ಇಂಡೋನೇಷ್ಯಾ ಸಹಿ | SNK

BrahMos missile Purchase | ಬ್ರಹ್ಮೋಸ್ ಕ್ಷಿಪಣಿ ಖರೀದಿ ಭಾರತದ ಜೊತೆ ಹಲವು ಒಪ್ಪಂದಕ್ಕೆ ಇಂಡೋನೇಷ್ಯಾ ಸಹಿ | SNK

ಜಕಾರ್ತಾ: ನಿರೀಕ್ಷೆಯಂತೆ ಭಾರತದ ಸ್ವದೇಶಿ ನಿರ್ಮಿತ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಇಂಡೋನೇಷ್ಯಾ ಸಹಿ ಹಾಕಿದೆ. ದ್ವಿಪಕ್ಷೀಯ ಪಾಲುದಾರಿಕೆ ಬಲಪಡಿಸುವ ದೃಷ್ಟಿಯಿಂದ ರಕ್ಷಣಾ ಮತ್ತು ಕಾರ್ಯತಂತ್ರದ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ್ದು, ಇದರಲ್ಲಿ ಇಂಡೋನೇಷ್ಯಾ ಮಿಲಿಟರಿಗೆ ಬ್ರಹ್ಮೋಸ್ ಕ್ಷಿಪಣಿ ಪೂರೈಕೆ ಒಪ್ಪಂದವೂ ಸೇರಿದೆ.  ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಒಪ್ಪಂದಕ್ಕೆ ಸಹಿ ಹಾಕಿದ್ದು, ಬಳಿಕ, ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಭಾರತ ಮತ್ತು ಇಂಡೋnEಷ್ಯಾವು ಸಾಗರದ ಭದ್ರತೆ ಮತ್ತು ರಕ್ಷಣಾ ಒಪ್ಪಂದದ ಚೌಕಟ್ಟನ್ನೂ ಸಹ ಅಂತಿಮಗೊಳಿಸಿವೆ. ಸ್ಟೀಲ್ ಪೂರೈಕೆ ಸರಪಳಿಗೆ ಸಂಬಂಧಿಸಿದ ಖನಿಜಗಳು ಮತ್ತು ತಂತ್ರಜ್ಞಾನ ಸಂಬಂಧಿತ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.

ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಇಂಡೋನೇಷ್ಯಾ ರಾಜಧಾನಿ ಜಕಾರ್ತಾಗೆ ಬಂದಿಳಿದರು. ಪ್ರಧಾನಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಒನ್ ವಿಮಾನವು ಇಂಡೋನೇಷ್ಯಾ ವಾಯುಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ವಾಯುಪಡೆಯ ವಿಮಾನಗಳು ಅದನ್ನು ಹಿಂಬಾಲಿಸಿದ್ದವು. ಅಧ್ಯಕ್ಷ ಪ್ರಬೊವೊ ಖುದ್ದು ಆಗಮಿಸಿ ಪ್ರಧಾನಿ ಮೋದಿಯವರನ್ನು ಬರಮಾಡಿಕೊಂಡರು. ಭಾರತದ ಆಯಕ್ಟ್ ಈಸ್ಟ್‌ ನೀತಿ, ನಹಾಸಾಗರ ದೃಷ್ಟಿಕೋನ ಮತ್ತು ಮುಕ್ತ, ಸುಗಮ ಮತ್ತು ಎಲ್ಲರನ್ನೂ ಒಳಗೊಂಡ ಇಂಡೊ ಪೆಸಿಫಿಕ್ ವಲಯ ನಿರ್ಮಾಣದ ಬಗ್ಗೆಯೂ ಚರ್ಚಿಸುವ ಗುರಿ ಸಹ ಇದೆ. ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಬಿಂಟಾಂಗ್ ಆದಿಪೂರ್ಣ ಆಫ್ ದಿ ರಿಪಬ್ಲಿಕ್ ಆಫ್ ಇಂಡೋನೇಷಾ'ನೀಡಿ ಗೌರವಿಸಲಾಗಿದೆ.

'ಇಂದಿನ ಯುಗದಲ್ಲಿ ತಂತ್ರಜ್ಞಾನ ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವು ಅತ್ಯಂತ ಮಹತ್ವ ಪಡೆದಿದೆ. ನಿರ್ಣಾಯಕ ಖನಿಜಗಳು ಮತ್ತು ಸ್ಟೀಲ್ ವಲಯದ ಪೂರೈಕೆ ಸರಪಳಿ ಬಲಪಡಿಸುವ ದೃಷ್ಟಿಯಿಂದ ಪ್ರಮುಖ ಒಪ್ಪಂದಕ್ಕೆ ಬರಲಾಗಿದೆ' ಎಂದು ಮೋದಿ ಹೇಳಿದ್ದಾರೆ. ಸ್ಟೇನ್‌ಲೆಸ್ ಸ್ಟೀಲ್ ಮತ್ತು ನಿರ್ಣಾಯಕ ಖನಿಜಗಳ ಕುರಿತಂತೆ ಉಭಯ ದೇಶಗಳ ಕಂಪನಿಗಳ ನಡುವೆ ಒಪ್ಪಂದದ ಹೊಸ ಆರಂಭ ಆಗಿದೆ. ಭಾರತ-ಇಂಡೋನೇಷ್ಯಾ ನಡುವೆ ಪಾಲುದಾರಿಕೆಯ ಸುವರ್ಣ ಅಧ್ಯಾಯ ಆರಂಭವಾಗಿದೆ ಎಂದು ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.