ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಬಗ್ಗೆ ಚಿತ್ರತಂಡ ಒಂದೊಂದೆ ಅಪ್‌ಡೇಟ್‌ಗಳನ್ನು ನೀಡುತ್ತಿದೆ. ಈಗಾಗಲೇ ಟಾಕ್ಸಿಕ್ ಚಿತ್ರದ ಎರಡು ಟೀಸರ್‌ಗಳು ಬಿಡುಗಡೆಯಾಗಿ ಸಖತ್ ಸದ್ದು ಮಾಡಿವೆ. ಈಗ ಟಾಕ್ಸಿಕ್‌ನ ಮೊದಲ ಹಾಡು ಬಿಡುಗಡೆಗೆ ಸಮಯ ನಿಗದಿಯಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಪೋಸ್ಟರ್ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. 'ಟಾಕ್ಸಿಕ್' ಸಿನಿಮಾದ ಮೊದಲ ಹಾಡು ಮಾರ್ಚ್ 2ರಂದು ರಿಲೀಸ್ ಆಗಲಿದೆ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
Toxic: ಕನ್ನಡ ಅಲ್ಲ, ಈ ಭಾಷೆಯಲ್ಲಿ ಟಾಕ್ಸಿಕ್ ಟೀಸರ್‌ಗೆ ಬಂತು ದಾಖಲೆ ವೀಕ್ಷಣೆ ಯಶ್ ಅವರ ಟಾಕ್ಸಿಕ್ಸ್‌ನಲ್ಲಿ ಮತ್ತೋರ್ವ ಬಹುಭಾಷಾ ನಟ; 'ಕರ್ಮಡಿ'ಯಾಗಿ ಸುದೇವ್ ಈ ಪೋಸ್ಟರ್‌ನಲ್ಲಿ ನಟ ಯಶ್ ಜೊತೆಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡಿದ್ದಾರೆ. ಯಶ್‌ನನ್ನು ತಬ್ಬಿಕೊಂಡ ಲುಕ್‌ನಲ್ಲಿ ನಟಿ ಕಿಯಾರಾ ಅಡ್ವಾಣಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾವನ್ನು 'ಕೆವಿಎನ್ ಪ್ರೊಡಕ್ಷನ್ಸ್' ಸಂಸ್ಥೆ ನಿರ್ಮಾಣ ಮಾಡಿದ್ದು, ಮಾರ್ಚ್ 19ರಂದು ವಿಶ್ವದಾದ್ಯಂತ 'ಟಾಕ್ಸಿಕ್' ಬಿಡುಗಡೆಯಾಗಲಿದೆ. ಇದರ ಜೊತೆಗೆ 'ಧುರಂಧರ್ 2' ಕೂಡ ಬಿಡುಗಡೆಗೆ ಸಜ್ಜಾಗಿದೆ.