ವಿಜಯನಗರ: ಕಾಲುವೆಯಲ್ಲಿ ನವಜಾತ ಶಿಶು ಮೃತದೇಹ ತೇಲಿಬಂದಿರುವ ಹೃದಯ ವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ಆಗಷ್ಟೇ ಜನ್ಮ ತಾಳಿದ ನವಜಾತ ಶಿಶುವಿನ ಮೃತದೇಹವಾಗಿದೆ. ಹೊಸಪೇಟೆ ನಗರದ ಬಸವಣ್ಣ ಕಾಲುವೆಯಲ್ಲಿ ಶಿಶುವಿನ ಮೃತದೇಹ ತೇಲಿ ಬಂದಿದೆ. ಮೃತದೇಹ ನೋಡಿ ಮಮ್ಮಲ ಸಾರ್ವಜನಿಕರು ಮರುಗಿದರು. ಹೊಸಪೇಟೆ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.