2026-07-23 07:30:56

Bird fly in Chennai | ಚೆನ್ನೈನಲ್ಲಿ ಹಕ್ಕಿ ಜ್ವರ ಸಾವಿರಾರು ಕಾಗೆಗಳ ಸಾವು ಕರ್ನಾಟಕದಲ್ಲೂ ಆತಂಕ | Speed News kannada

Bird fly in Chennai | ಚೆನ್ನೈನಲ್ಲಿ ಹಕ್ಕಿ ಜ್ವರ ಸಾವಿರಾರು ಕಾಗೆಗಳ ಸಾವು ಕರ್ನಾಟಕದಲ್ಲೂ ಆತಂಕ | Speed News kannada

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಹಕ್ಕಿ ಜ್ವರ (H5N1) ಕಾಣಿಸಿಕೊಂಡಿದ್ದು, ಸಾವಿರಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ. ಇದರಿಂದ ಕರ್ನಾಟಕದಲ್ಲೂ ಆತಂಕ ಶುರುವಾಗಿದೆ. 
ಭೋಪಾಲ್‌ನ ಐಸಿಎಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ (NIHSAD) ಪ್ರಯೋಗಾಲಯದಲ್ಲಿ ಮಾದರಿ ಪರೀಕ್ಷೆ ನಡೆದಿದೆ. ಈ ವರದಿ ಪ್ರಕಾರ ತಮಿಳುನಾಡಿನ ಕಾಗೆಗಳಲ್ಲಿ ರೋಗಕಾರಕ ಹಕ್ಕಿ ಜ್ವರ ಅಥವಾ ಏವಿಯನ್ ಇನ್‌ಫ್ಲುಯೆಂಜಾ (H5N1) ಇರುವುದು ದೃಢಪಟ್ಟಿದೆ. 
ಕಳೆದ ತಿಂಗಳು ತಮಿಳುನಾಡು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಪ್ರಾಣಿ ರೋಗ ಗುಪ್ತಚರ ಘಟಕವು ಸಲ್ಲಿಸಿದ ವರದಿಯಲ್ಲಿ ಕಾಗೆಯ ಮಾದರಿಗಳಲ್ಲಿ (ಕಾಗೆಯ ರಕ್ತ /ಅವಶೇಷಗಳ ಮಾದರಿಗಳು) H5N1 ವೈರಸ್ ಪತ್ತೆಯಾಗಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸತ್ತ ಪಕ್ಷಿಗಳನ್ನು ಭೂಮಿಯ ಆಳದಲ್ಲಿ ಹೂಳಲು ಸೂಚನೆ ನೀಡಲಾಗಿತ್ತು. 
ಬೆಸೆಂಟ್ ಸ್ಮಾರಕ ಪ್ರಾಣಿ ಚಿಕಿತ್ಸಾಲಯದ (BMAD) ಶ್ರವಣ್ ಕೃಷ್ಣನ್ ಅವರು ಕಳೆದ ಕೆಲವು ವಾರಗಳಲ್ಲಿ ನಗರದಲ್ಲಿ 1,000-1,500 ಕಾಗೆಗಳು ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ. ಪ್ರತಿದಿನ ನಮಗೆ ಅಸಹಜವಾಗಿ ಕಾಗೆಗಳು ಸಾವನ್ನಪ್ಪುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಜನರು ಅನಾರೋಗ್ಯ ಪೀಡಿತ ಕಾಗೆಗಳನ್ನು ನಮ್ಮ ಸಂಸ್ಥೆಗೆ ನಿಯಮಿತವಾಗಿ ತರುತ್ತಿದ್ದಾರೆ. ಇಂದು ಮೂರು ಕಾಗೆಗಳನ್ನು ತಂದಿದ್ದಾರೆ ಎಂದು ತಿಳಿಸಿದ್ದಾರೆ. 
ಮುನ್ನೆಚ್ಚರಿಕೆ ಕ್ರಮಗಳು: 

ಮೃತಪಟ್ಟ ಪಕ್ಷಿಗಳ ಮೃತದೇಹಗಳನ್ನು ವೈಜ್ಞಾನಿಕವಾಗಿ ಆಳವಾಗಿ ಭೂಮಿಯಲ್ಲಿ ಹೂಳಬೇಕು. ಪಕ್ಷಿಗಳ ಆವಾಸಸ್ಥಾನಗಳ ಸಮೀಪ ವಾಸಿಸುವ, ಕೋಳಿ ಫಾರಂ ಅಥವಾ ಪ್ರಾಣಿಗಳೊಂದಿಗೆ ಕೆಲಸ ಮಾಡುವ ಜನರಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.