2026-03-07 02:07:42

Bihar CM post goes to BJP | ನಿತೀಶ್‌ ಕುಮಾರ್‌ ರಾಜ್ಯಸಭೆಗೆ ಬಿಹಾರ ಸಿಎಂ ಹುದ್ದೆ ಬಿಜೆಪಿ ಪಾಲಿಗೆ | Speed News Kannada

Bihar CM post goes to BJP | ನಿತೀಶ್‌ ಕುಮಾರ್‌ ರಾಜ್ಯಸಭೆಗೆ ಬಿಹಾರ ಸಿಎಂ ಹುದ್ದೆ ಬಿಜೆಪಿ ಪಾಲಿಗೆ | Speed News Kannada

ಪಟ್ನಾ: ಬಿಹಾರ ಮುಖ್ಯಮಂತ್ರಿಯಾಗಿ  20 ವರ್ಷ ವಿಜೃಂಭಿಸಿದ ನಿತೀಶ್ ಕುಮಾರ್ ರಾಷ್ಟ್ರ ರಾಜಕಾರಣಕ್ಕೆ ಪದೋನ್ನತಿ ಪಡೆದಿದ್ದಾರೆ. ಬಿಹಾರದಿಂದ ಅವರು ರಾಜ್ಯಸಭೆ ಪ್ರವೇಶಿಸಲಿದ್ದಾರೆ.
ಸಸ್ವತಃ ನಿತೀಶ ಕುಮಾರ್‌ ಅವರೇ ಎಕ್ಸ್‌ ನಲ್ಲಿ ಈ ವಿಷಯ ಹಂಚಿಕೊಂಡಿದಾರೆ. ನನ್ನ ರಾಜಕೀಯ ಜೀವನದ ಆರಂಭದಿಂದಲೇ ಬಿಹಾರ ವಿಧಾನಮಂಡಲದ ಎರಡೂ ಸದನ ಹಾಗೂ ಸಂಸತ್ತಿನ ಎರಡೂ ಸದನಗಳಲ್ಲಿ ಸದಸ್ಯನಾಗಬೇಕೆಂಬ ಆಸೆ ನನ್ನ ಮನಸ್ಸಿನಲ್ಲಿತ್ತು. ನನ್ನ ಆಸೆಯಂತೆ ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ರಾಜ್ಯಸಭೆ ಸದಸ್ಯನಾಗಲು ಬಯಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
75 ವರ್ಷದ ಹಿರಿಯ ನಾಯಕ ನಿತೀಶ್ ಕುಮಾರ್, 2025ರ ನವೆಂಬರ್‌ನಲ್ಲಿ ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 
“ಎರಡು ದಶಕಕ್ಕೂ ಹೆಚ್ಚು ಕಾಲ ನೀವು ನನ್ನ ಮೇಲೆ ನಿರಂತರವಾಗಿ ವಿಶ್ವಾಸ ಮತ್ತು ಬೆಂಬಲವನ್ನು ತೋರಿದ್ದೀರಿ. ಆ ವಿಶ್ವಾಸದ ಶಕ್ತಿಯಿಂದಲೇ ನಾವು ಬಿಹಾರ ಜನರಿಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಿದ್ದೇವೆ. ನಿಮ್ಮ ವಿಶ್ವಾಸ ಮತ್ತು ಬೆಂಬಲದ ಕಾರಣದಿಂದಲೇ ಇಂದು ಬಿಹಾರ ಅಭಿವೃದ್ಧಿ ಮತ್ತು ಗೌರವದ ಹೊಸ ದಿಕ್ಕನ್ನು ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.
ಯಾರಾಗಲಿದ್ದಾರೆ ಸಿಎಂ?
ಜೆಡಿಯು ಮುಖಂಡ ನಿತೀಶ್‌ ಕುಮಾರ್‌ ಅವರು ರಾಜ್ಯಸಭೆಗೆ ಪ್ರವೇಶ ಪಡೆಯುತ್ತಿದ್ದರೆ ಮುಖ್ಯಮಂತ್ರಿ ಪಟ್ಟ ಬಿಜೆಪಿಗೆ ದಕ್ಕಲಿದೆ. ಸಾಮ್ರಾಟ್ ಚೌಧರಿ ಅಥವಾ ವಿಜಯ್ ಕುಮಾರ್ ಸಿನ್ಹ ಅವರ ಹೆಸರು ಕೇಳಿ ಬರುತ್ತಿದೆ.
ರಾಜ್ಯಸಭೆಗೆ ಮಾರ್ಚ್ 16ರಂದು ಚುನಾವಣೆ ನಡೆಯಲಿದೆ. ನಿತೀಶ್‌ ಕುಮಾರ್‌ ಅವರ  ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಜರಾಗುವ ನಿರೀಕ್ಷೆಯಿದೆ.
ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆ ಪ್ರವೇಶಿಸುವುದು ಜೆಡಿಯು ಕಾರ್ಯಕರ್ತರಿಗೆ ಇಷ್ಟವಾದಂತಿಲ್ಲ.‌ ಹೀಗಾಗಿ ಇಂದು ಪಾಟ್ನಾದಲ್ಲಿ ನಿತೀಶ್ ಕುಮಾರ್ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.