2026-06-08 04:34:29

Biggest plane crash ever in Hubli | ಹುಬ್ಬಳ್ಳಿಯಲ್ಲಿ ತಪ್ಪಿದ ಅತಿದೊಡ್ಡ ವಿಮಾನ ದುರಂತ, 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು | Speed news kannada

Biggest plane crash ever in Hubli | ಹುಬ್ಬಳ್ಳಿಯಲ್ಲಿ ತಪ್ಪಿದ ಅತಿದೊಡ್ಡ ವಿಮಾನ ದುರಂತ, 40ಕ್ಕೂ ಹೆಚ್ಚು ಪ್ರಯಾಣಿಕರು ಪಾರು | Speed news kannada

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಂಭವನೀಯ ವಿಮಾನ ದುರಂತವೊಂದು ತಪ್ಪಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಬಚಾವ್​​ ಆಗಿದ್ದಾರೆ. FLY91 ಏರ್‌ಲೈನ್ಸ್‌ನ IC3407 ವಿಮಾನ ಲ್ಯಾಂಡಿಂಗ್‌ ವೇಳೆ ಏಕಾಏಕಿ ಕಂಟ್ರೋಲ್‌ ತಪ್ಪಿಹೋಗಿದೆ.  ಹವಾಮಾನ ವೈಪರಿತ್ಯದಿಂದ ವಿಮಾನ  ಲ್ಯಾಂಡಿಂಗ್‌ ಮಾಡಲಾಗದೆ ನಿರಂತರ ಆಗಸದಲ್ಲೇ 4 ಗಂಟೆಗಳ ಕಾಲ ಹಾರಾಟ ನಡೆಸಿ ನಂತರ ಲ್ಯಾಂಡಿಂಗ್‌ ಮಾಡಲಾಗಿದೆ.  ಹೈದರಾಬಾದ್​​ನಿಂದ ಹುಬ್ಬಳ್ಳಿ ಏರ್​​ಪೋರ್ಟ್​ಗೆ ಬರುತ್ತಿದ್ದ ಫ್ಲೈಟ್​​ನ ಸುರಕ್ಷಿತವಾಗಿ ಲ್ಯಾಂಡಿಂಗ್​ ಮಾಡಲು ಹರಸಾಹಸ ಪಡಲಾಗಿದ್ದು, ಅಂತಿಮವಾಗಿ ವಿಮಾನವನ್ನು ಬೆಂಗಳೂರಿನಲ್ಲಿ ಲ್ಯಾಂಡಿಂಗ್​​ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್​​​ನ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದ ಟೇಕಾಫ್​​ ಆಗಿದ್ದ ವಿಮಾನ ಸಂಜೆ 4.30ಕ್ಕೆ ಹುಬ್ಬಳ್ಳಿ ಏರ್​ಪೋರ್ಟ್​ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಲ್ಯಾಂಡಿಂಗ್‌ ವೇಳೆ ಆದ ತಾಂತ್ರಿಕ ಕಾರಣದಿಂದಾಗಿ ಲೇಟಾಗಿ ಲ್ಯಾಂಡಿಂಗ್‌ ಆಗಿದೆ. ಲ್ಯಾಂಡ್​​​​ ಆಗದೆ ವಿಮಾನ ಆಗಸದಲ್ಲೇ ಸುತ್ತಾಡುತ್ತಿದ್ದ ಕಾರಣ ಆತಂಕದಲ್ಲಿದ್ದ Fly91 ಏರ್​​ಲೈನ್ಸ್ ವಿಮಾನದಲ್ಲಿದ್ದ ಪ್ರಯಾಣಿಕರು ಕಣ್ಣೀರಿಟ್ಟಿರುವ ಪ್ರಸಂಗವೂ ನಡೆದಿದೆ. ನಾವಿನ್ನೂ ಜೀವಂತವಾಗಿ ಬರೋದು ಅನುಮಾನವಿದೆ ಎಂದು ಕೆಲವರು ಕುಟುಂಬಸ್ಥರಿಗೆ ಮೊಬೈಲ್​ನಲ್ಲಿ ಸಂದೇಶ ಕಳುಹಿಸಿದ್ದಾರೆ. ಈ ನಡುವೆ Fly91 ಏರ್​​ಲೈನ್ಸ್ ವಿರುದ್ಧ ಪ್ರಯಾಣಿಕರ ಕುಟುಂಬಸ್ಥರು ತೀವ್ರ ಅಸಮಾಧಾನ ಹೊರಹಾಕಿದ್ದು, ಘಟನೆ ಬಗ್ಗೆ ಮಾಹಿತಿ ನೀಡದೆ ಏರ್​​ಲೈನ್ಸ್​​ ನಿರ್ಲಕ್ಷ್ಯ ತೋರಿದ ಆರೋಪ ಕೂಡ ಕೇಳಿಬಂದಿದೆ. ವಿಮಾನದ ಲ್ಯಾಂಡಿಂಗ್​​ ವೇಳೆ ಅಸಲಿಗೆ ಆದ ಸಮಸ್ಯೆ ಏನು ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ. ಪ್ರಯಾಣಿಕರು ಹೇಳುವಂತೆ ತಾಂತ್ರಿಕದೋಷದಿಂದ ವಿಮಾನ ಹುಬ್ಬಳ್ಳಿಯಲ್ಲಿ ಲ್ಯಾಂಡ್​​ ಆಗಲು ಸಾಧ್ಯವಾಗಿಲ್ಲ. ಆದರೆ ಮೂಲಗಳ ಪ್ರಕಾರ ಹವಾಮಾನ ವೈಪರಿತ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.