2026-07-23 06:15:58

Bigg Boss Is Over.. The Heat Is Not over..! | ಬಿಗ್ ಬಾಸ್ ಮುಗಿದ್ರು.. ಗಿಲ್ಲಿ ಹವಾ ಮುಗ್ದಿಲ್ಲ..! | Speed News Kannada

Bigg Boss Is Over.. The Heat Is Not over..! | ಬಿಗ್ ಬಾಸ್  ಮುಗಿದ್ರು.. ಗಿಲ್ಲಿ ಹವಾ ಮುಗ್ದಿಲ್ಲ..!  | Speed News Kannada

ಬೆಂಗಳೂರು : ಬಿಗ್ ಬಾಸ್ ಮುಗಿದು 2 ವಾರಗಳಾದ್ರೂ ಸಹ ಕಾಮಿಡಿ ಪಂಟರ್ ಗಿಲ್ಲಿ ಹವಾ ಕಮ್ಮಿಯಾಗಿಲ್ಲ. ಗಿಲ್ಲಿ ಹೆಸರು ಗಲ್ಲಿ ಗಲ್ಲಿಗಳಲ್ಲೂ ಕ್ರೇಜ್ ಮಾಡ್ತಾ ಇದೆ. ಮಂಡ್ಯ ಹುಡುಗನದ್ದೇ ಹವಾ. ಕರುನಾಡಿನ ಮನೆ ಮಾತಾಗಿರೋ ಗಿಲ್ಲಿ ಎಲ್ಲೇ ಹೋದ್ರು.. ಜನ ಸೇರ್ತಾ ಇದ್ದಾರೆ ಮಂಡ್ಯದ ಹುಡುಗ ಗಿಲ್ಲಿ ಗೆ  ಇರೋವಷ್ಟು ಕ್ರೇಜ್ ಯಾರಿಗೂ ಇಲ್ಲ ಅಂದ್ರೆ ತಪ್ಪಾಗಲ್ಲ.  
ಗಿಲ್ಲಿ ನೋಡಲು ಗಂಗೋತ್ಸವದಲ್ಲಿ ಅಭಿಮಾನಿಗಳು ಮುಗಿಬಿದ್ದಿದ್ರು.. ದರ್ಶನ್ ಹಾಗೂ ಯಶ್ ಗೆ ಎಷ್ಟು ಕ್ರೇಜ್ ಎಷ್ಟು ಅಭಿಮಾನಿಗಳು ಇದರೆ ಅನ್ನೋದು ನಮಗೆಲ್ಲ ಗೊತ್ತೇ ಇದೆ ಅದೇ ರೀತಿ ಈಗ ಒಬ್ಬ ಹಳ್ಳಿಯ ಹುಡುಗ ಗಿಲ್ಲಿ ನಟನಿಗೂ ಅದೇ ಕ್ರೇಜ್ ಶುರುವಾಗಿದೆ ಗಿಲ್ಲಿ ನೋಡೋಕೆ ನೂಕು ನುಗ್ಗಲಿನಲ್ಲಿ ಫ್ಯಾನ್ಸ್ ಜಮಾಯಿಸಿದ್ದರೆ. ಕೊನೆಗೆ ಗಿಲ್ಲಿಯನ್ನ ರಕ್ಷಿಸೋ ಸಲುವಾಗಿ ಪೊಲೀಸರು ಸ್ಟೇಜ್ ಹಿಂದೆಯಿಂದ ಕರ್ಕೊಂಡು ಹೋಗುವ ಪ್ರಸಂಗ ಎದುರಾಗಿತ್ತು. ಮೊನ್ನೆ ಅಷ್ಟೇ ಗಂಗೋತ್ಸವದಲ್ಲಿ ಮಿಂಚಿದ್ದ ಗಿಲ್ಲಿ ಕನಕೋತ್ಸವದಲ್ಲೂ ಕಮಾಲ್ ಮಾಡಿದ್ದಾನೆ. ಕನ್ನಡಿಗರ ಡಾರ್ಲಿಂಗ್ ಆಗಿರೋ ಗಿಲ್ಲಿನ ಕರೆಸಿದ್ರೆ ಆ ಪ್ರೋಗ್ರಾಮ್ ಬಂಪರ್ ಹಿಟ್ ಹಾಗೆ ಆಗುತ್ತೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಯಾವುದೇ ಉತ್ಸವ ಇರಲಿ, ಹಬ್ಬ ಇರಲಿ, ಅಲ್ಲಿ ಮೈನ್ ಗೆಸ್ಟ್ ಅಂದ್ರೆ ಅದು ಗಿಲ್ಲಿನೇ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.