2026-06-08 01:25:51

Bigg Boss contestant Rashika visits Sirsi Marikamba Temple | ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಸ್ಪರ್ಧಿ ರಾಶಿಕಾ | Speed News Kannada

Bigg Boss contestant Rashika visits Sirsi Marikamba Temple | ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಬಿಗ್‌ಬಾಸ್ ಸ್ಪರ್ಧಿ ರಾಶಿಕಾ | Speed News Kannada

ಬಿಗ್‌ಬಾಸ್ ಸ್ಪರ್ಧಿ, ನಟಿ ರಾಶಿಕಾ ಅವರು ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ರಾಶಿಕಾ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ ಮಾರಿಕಾಂಬಾ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ವತಿಯಿಂದ ಅವರಿಗೆ ಸನ್ಮಾನ ಮಾಡಿ, ಕಾಣಿಕೆಯಾಗಿ ದೇವಿಯ ಫೋಟೊವನ್ನು ನೀಡಿರುವುದನ್ನು ವಿಡಿಯೊದಲ್ಲಿ ಕಾಣಬಹುದು.ರಾಶಿಕಾ ಅವರು ಹಂಚಿಕೊಂಡಿರುವ ಮತ್ತೊಂದು ವಿಡಿಯೊದಲ್ಲಿ ಶಾಲೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಶಿರಸಿಯ ಬೆಕ್ಕೋಡ ಸರ್ಕಾರಿ ಶಾಲೆಯ ಅಮೃತ ಮಹೋತ್ಸವ ಹಾಗೂ ವಾರ್ಷಿಕೋತ್ಸವಕ್ಕೆ ರಾಶಿಕಾ ಹಾಗೂ ಅಣ್ಣಯ್ಯ ಧಾರಾವಾಹಿಯ ಮನು ಪಾತ್ರಧಾರಿ ತೇಜಸ್ ಗೌಡ ಅವರನ್ನು ಆಹ್ವಾನಿಸಲಾಗಿತ್ತು. ಇವರಿಬ್ಬರು ಸಮಾರಂಭದಲ್ಲಿ ಭಾಗಿಯಾಗಿ, ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಜೊತೆ ಒಂದಿಷ್ಟು ಹೊತ್ತು ಕಾಲ ಕಳದಿರುವುದನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಾಶಿಕಾ ಅವರು ನಟ ರವಿಚಂದ್ರನ್ ಜೊತೆ 'ಪ್ಯಾರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ 'ಒಂದೇ ಮಾತಾಲಿ ಹೇಳೋದಾದರೆ' ಹಾಡು ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.