2026-07-23 10:25:56

BESCOM guidelines for those buying new induction stoves|ಹೊಸ ಇಂಡಕ್ಷನ್ ಸ್ಟೌವ್ ಖರೀದಿಸುವವರಿಗೆ ಬೆಸ್ಕಾಂ ಮಾರ್ಗಸೂಚಿ|Speed News Kannada

BESCOM guidelines for those buying new induction stoves|ಹೊಸ ಇಂಡಕ್ಷನ್ ಸ್ಟೌವ್ ಖರೀದಿಸುವವರಿಗೆ ಬೆಸ್ಕಾಂ ಮಾರ್ಗಸೂಚಿ|Speed News Kannada

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಎಲ್ಲರು ಪರ್ಯಾಯವಾಗಿ ಇಂಡಕ್ಷನ್‌ ಸ್ಟೌವ್‌ಗೆ ಮೊರೆ ಹೋಗುತ್ತಿದ್ದಾರೆ. ಇನ್ನೂ ಮಾರುಕಟ್ಟೆಯಲ್ಲಿ ಹೊಸ ಇಂಡಕ್ಷನ್‌ ಸ್ಟೌವ್‌ ಖರೀದಿಸುವ ಜನರಿಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಬೆಸ್ಕಾಂ ಸಲಹೆಯನ್ನು ನೀಡಿದೆ.  ಗ್ರಾಹಕರ ದೃಷ್ಠಿಯನ್ನು ಮನದಲ್ಲಿಟ್ಟುಕೊಂಡು ಹೊಸ ಇಂಡಕ್ಷನ್‌ ಖರೀದಿಸುವಾಗ ಕೇವಲ ಬೆಲೆಯನ್ನು ಮಾತ್ರ ನೋಡದೆ, ಅದರ ಗುಣಮಟ್ಟ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಐಎಸ್‌ಐ ಪ್ರಮಾಣಿತ ಹಾಗೂ ವಿದ್ಯುತ್‌ ದಕ್ಷತೆಯುಳ್ಳ ಇಂಡಕ್ಷನ್‌ ಸ್ಟೌವ್‌ ಖರೀದಿಸುವಂತೆ ಹಾಗೂ 3-ಪಿನ್‌ ಇರುವ ಇಂಡಕ್ಷನ್‌ ಸ್ಟೌವ್‌ಗಳನ್ನೇ ಖರೀದಿಸಿ ಎಂದು ಬೆಸ್ಕಾಂ ಮಾಹಿತಿ ನೀಡಿದೆ. https://x.com/NammaBESCOM?s

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.