2026-06-08 02:43:07

Bengaluru Airport After Mysterious Balloon Spotted! | ಬೆಂಗಳೂರು ಏರ್ ಪೋರ್ಟ್ ನಲ್ಲಿ ನಿಗೂಢ ಬಲೂನ್ ಪತ್ತೆ ಹೆಚ್ಚಿದ ಭದ್ರತೆ! | Speed News Kannada

Bengaluru Airport After Mysterious Balloon Spotted! | ಬೆಂಗಳೂರು ಏರ್ ಪೋರ್ಟ್ ನಲ್ಲಿ ನಿಗೂಢ ಬಲೂನ್ ಪತ್ತೆ ಹೆಚ್ಚಿದ ಭದ್ರತೆ! | Speed News Kannada

ಬೆಂಗಳೂರು: ಬೆಂಗಳೂರಿನ(Bengaluru) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಅನಧಿಕೃತ ಏರ್ ಬಲೂನ್(Balloon) ಬಂದು ಬಿದಿದ್ದೆ. ನಿರ್ಬಂಧಿತ ವಾಯುನೆಲೆಗೆ ಈ ರೀತಿ ಏರ್ ಬಲೂನ್ ಬಂದು ಬಿದ್ದಿರುವುದನ್ನು ನೋಡಿ ಅಲ್ಲಿನ ಜನರು ಭಯಭೀತರಾದರು. ಹೊಸಕೋಟೆ ಮೂಲದ ಖಾಸಗಿ ನಿರ್ಮಾಣ ಕಂಪನಿ ಈ ಬಲೂನ್ ಅನ್ನು ಆ ಪ್ರದೇಶದಲ್ಲಿ ಹಾರಾಡಲು ಬಿಟ್ಟಿದ್ದು, ನಿಯಂತ್ರಣ ತಪ್ಪಿ ಏರ್ಪೋಟ್್ರ ಬಲೂನ್ ಬಂದಿದೆ. ಕೂಡಲೇ ಸಿಎಸ್‌ಎಫ್‌ ಸಿಬ್ಬಂದಿ ಬಲೂನ್ ನ್ನು ವಶಕ್ಕೆ ಪಡೆದಿದೆ.
ಅಲ್ಲದೆ ಈ ಬಗ್ಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೋಲೀಸ್ ಠಾಣೆಗೆ ಗೆ ದೂರು ನೀಡಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಾಂತ್ರಿಕ ದೋಷ ಅಥವಾ ನಿರ್ಲಕ್ಷ್ಯವೇ ಘಟನೆಗೆ ಕಾರಣವಾಗಿರಬಹುದು ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. DGCA ನಿಯಮದ ಪ್ರಕಾರ ಏರ್ಪೋಟ್್ರ ನಲ್ಲಿ ಯಾವುದೇ ಡೋನ್ ಮತ್ತು ಬಲೂನ್ ಹಾರಾಟವನ್ನು ನಿಷೇಧಿಸಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.