2026-06-08 02:44:25

Ben Duckett of England fined 1,100 pounds|ಇಂಗ್ಲೆಂಡ್ ತಂಡದ ಬೆನ್ ಡಕೆಟ್ಗೆ 1,100 ಪೌಂಡ್ ಫೈನ್|Speed News Kannada

Ben Duckett of England fined 1,100 pounds|ಇಂಗ್ಲೆಂಡ್ ತಂಡದ ಬೆನ್ ಡಕೆಟ್ಗೆ 1,100 ಪೌಂಡ್ ಫೈನ್|Speed News Kannada

ಇಂಗ್ಲೆಂಡ್‌ ತಂಡದ ಆರಂಭಿಕ ಆಟಗಾರನಾದ ಬೆನ್‌ ಡಕೆಟ್‌ 2026ರ ಐಪಿಎಲ್‌ ಟೂರ್ನಿಯಿಂದ ಹೊರಗೆ ಉಳಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಬೆನ್ ಡಕೆಟ್ ಟೂರ್ನಿ ಆರಂಭಕ್ಕೂ ಮುನ್ನ ತಮ್ಮ ಒಪ್ಪಂದದಿಂದ ಹಿಂದೆ ಸರಿದ ಕಾರಣ ಇದೀಗ ನಿಷೇಧಕ್ಕೆ ಒಳಗಾಗಿದ್ದಾರೆ. ಯಾವುದೇ ವಿದೇಶಿ ಆಟಗಾರ ಹರಾಜಿನ ನಂತರ ವೈದ್ಯಕೀಯ ಕಾರಣವಿಲ್ಲದೇ ಟೂರ್ನಿಯಿಂದ ಹಿಂದೆ ಸರಿದರೆ ಅವರಿಗೆ ಅಂತಹ ಆಟಗಾರರಿಗೆ ಬಿಸಿಸಿಐ ಟೂರ್ನಿಯಿಂದ ಎರಡು ವರ್ಷಗಳ ಕಾಲ ಬಹಿಷ್ಕರಿಸಲಾಗುತ್ತದೆ. ಐಪಿಎಲ್‌ ವಿವಾದ ಬಳಿಕ ಇದೀಗ ಮತ್ತೊಂದು ದಂಡಕ್ಕೆ ಗುರಿಯಾಗಿದ್ದಾರೆ. ಬೆನ್ ಡಕೆಟ್ ತಮ್ಮ ಲ್ಯಾಂಡ್ ರೋವರ್ ಕಾರನ್ನು ನಿಗದಿಗಿಂತ ಹೆಚ್ಚಿನ ವೇಗದಲ್ಲಿ ಚಲಾಯಿಸಿದ್ದಕ್ಕಾಗಿ ದಂಡ ತೆತ್ತಿದ್ದಾರೆ. ಸ್ಟಾಫರ್ಡ್‌ಶೈರ್‌ನ ಎ50 ರಸ್ತೆಯಲ್ಲಿ ಡಕೆಟ್ 93 ಮೈಲಿ ವೇಗದಲ್ಲಿ ಕಾರು ಚಲಾಯಿಸಿದ್ದಕ್ಕಾಗಿ £1,100 ಪೌಂಡ್‌ ಅಂದರೆ ಸುಮಾರು ₹1.2 ಲಕ್ಷ ದಂಡವನ್ನು ವಿಧಿಸಲಾಗಿದೆ

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.