2026-06-08 01:22:51

Auto Driver Honesty | ಮಹಿಳೆ ಬಿಟ್ಟು ಹೋಗಿದ್ದ ಪರ್ಸ್, ಐಫೋನ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ | Speed News Kannada

Auto Driver Honesty | ಮಹಿಳೆ ಬಿಟ್ಟು ಹೋಗಿದ್ದ ಪರ್ಸ್, ಐಫೋನ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ | Speed News Kannada

ಬೆಂಗಳೂರು: ಮಹಿಳೆ ಬಿಟ್ಟು ಹೋಗಿದ್ದ ಪರ್ಸ್, ಐಫೋನ್ ತಂದು ಕೊಟ್ಟ ಆಟೋ ಡ್ರೈವರ್ (Auto Driver) ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನ (Bengaluru) ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಉತ್ತರ ಭಾರತ ಮೂಲದ ಮಹಿಳೆಯೊಬ್ಬರು ರ‍್ಯಾಪಿಡೊ ಮೂಲಕ ಆಟೋ ಬುಕ್ ಮಾಡಿದ್ದರು. ಪ್ರಯಾಣಿಸಿದ ನಂತರ ಪರ್ಸ್ ಹಾಗೂ ಐಫೋನ್ ಮರೆತು ಆಟೋ ಇಳಿದು ಹೋಗಿದ್ದರು. ಇದಾದ ಕೆಲ ಹೊತ್ತಿನ ನಂತರ ಪರ್ಸ್ ಮತ್ತು ಮೊಬೈಲ್ ಮರೆತಿರೋದು ಗೊತ್ತಾಗಿ ಠಾಣೆಗೆ ಮಾಹಿತಿ ನೀಡಿದ್ದರು. ಕೊತ್ತನೂರು ಠಾಣೆ ಪೊಲೀಸರು ಮಹಿಳೆ ನಂಬರ್‌ಗೆ ಕಾಲ್ ಮಾಡಿದಾಗ ಆಟೋ ಡ್ರೈವರ್ ಪ್ರತಿಕ್ರಿಯಿಸಿ, ಮೊಬೈಲ್ ಮತ್ತು ಪರ್ಸ್ ಅನ್ನು ಯುವತಿಗೆ ಮರಳಿಸಿದ್ದಾರೆ. ಆಟೋ ಡ್ರೈವರ್ ಕೆಲಸಕ್ಕೆ ಮಹಿಳೆ ಹಾಗೂ ಪೊಲೀಸ್ ಸಿಬ್ಬಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.