2026-06-08 01:39:16

Astronauts capture rare image of the moon | ಮನುಷ್ಯರ ಕಣ್ಣಿಗೆ ಎಂದೂ ಕಾಣದ ಚಂದ್ರನ ಅಪರೂಪದ ಚಿತ್ರ ಸೆರೆಹಿಡಿದ ಗಗನಯಾನಿಗಳು | Speed News Kannada

Astronauts capture rare image of the moon | ಮನುಷ್ಯರ ಕಣ್ಣಿಗೆ ಎಂದೂ ಕಾಣದ ಚಂದ್ರನ ಅಪರೂಪದ ಚಿತ್ರ ಸೆರೆಹಿಡಿದ ಗಗನಯಾನಿಗಳು | Speed News Kannada

ಚಂದ್ರನ ಅಂಗಳಕ್ಕೆ ಮತ್ತೆ ಮಾನವನನ್ನು ಇಳಿಸುವ ನಾಸಾದ ಆರ್ಟೆಮಿಸ್ ಮಿಷನ್ ಬಾಹ್ಯಾಕಾಶ ನೌಕೆಯಲ್ಲಿರುವ ಗಗನಯಾನಿಗಳು ಮಾರ್ಗಮಧ್ಯದಿಂದ ಚಂದ್ರನ ಮತ್ತೊಂದು ಬದಿಯ ಅಪರೂಪದ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ನಾಸಾ, 'ಈ ಚಿತ್ರವು ಚಂದ್ರನ ಮತ್ತೊಂದು ಭಾಗವನ್ನು ತೋರಿಸುತ್ತದೆ. ಇದನ್ನು ನೋಡಲು ಈವರೆಗೆ ಸಾಧ್ಯವಾಗಿರಲಿಲ್ಲ' ಎಂದು ಹೇಳಿದೆ. ಚಂದ್ರನತ್ತ ಹೊರಟಿರುವ ಓರಿಯನ್ ಬಾಹ್ಯಾಕಾಶ ನೌಕೆಯಲ್ಲಿ ಮೂವರು ಅಮೆರಿಕನ್ನರು ಮತ್ತು ಒಬ್ಬ ಕೆನಡಾದ ಗಗನಯಾನಿ ಇದ್ದಾರೆ. ಸೋಮವಾರ ಇದು ತನ್ನ ಗಮ್ಯಸ್ಥಾನವನ್ನು ತಲುಪುವ ನಿರೀಕ್ಷೆ ಇದೆ. ಕೆನಡಾದ ಜೆರೆಮಿ ಹ್ಯಾನ್ಸೆನ್ ಮತ್ತು ಅಮೆರಿಕದ ವಿಕ್ಟರ್ ಗ್ಲೋವರ್, ರೀಡ್ ವೈಸ್‌ಮನ್‌ ಮತ್ತು ಕ್ರಿಸ್ಟಿನಾ ಕೋಚ್ ಇದರಲ್ಲಿರುವ ಯಾನಿಗಳು. 1972ರ ಅಪೋಲೋ 17 ಸಿಬ್ಬಂದಿಯ ನಂತರ ಮನುಷ್ಯರನ್ನು ಹೊತ್ತು ಚಂದ್ರನತ್ತ ಪ್ರಯಾಣಿಸುತ್ತಿರುವ 2ನೇ ನೌಕೆ ಇದಾಗಿದೆ.
 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.