2026-06-08 01:29:57

Appu name is Duddu Anushree Garam|ಅಪ್ಪು ಹೆಸರಲ್ಲಿ ದುಡ್ಡು ಅನುಶ್ರೀ ಗರಂ|Speed News Kannada

Appu name is Duddu Anushree Garam|ಅಪ್ಪು ಹೆಸರಲ್ಲಿ ದುಡ್ಡು  ಅನುಶ್ರೀ ಗರಂ|Speed News Kannada

 ಆ್ಯಂಕರ್ ಅನುಶ್ರೀ ಅವರು ಪುನೀತ್ ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿ. ಈ ಕಾರಣದಿಂದಲೇ ಅನುಶ್ರೀ ಅವರ ಯೂಟ್ಯೂಬ್ ಲೋಗೋದಲ್ಲಿ ಸಾಕಷ್ಟು ಪುನೀತ್ ಫೋಟೋ ಸೇರಿಸಿಕೊಂಡಿದ್ದಾರೆ. ಪುನೀತ್ ನಿಧನದ ಬಳಿಕ ಅನುಶ್ರೀ ಸಾಕಷ್ಟು ಬಾರಿ ಬಿಕ್ಕಿ ಬಿಕ್ಕಿ ಅತ್ತಿದ್ದಿದೆ.  ತಮ್ಮ ಮದುವೆಯಲ್ಲಿ ಪುನೀತ್ ಫೋಟೋ ಇಟ್ಟು ಅವರು ಪೂಜಿಸಿದ್ದರು. ಇದು ಪುನೀತ್ ಮೇಲೆ ಅವರಿಗೆ ಇರೋ ಪ್ರೀತಿಗೆ ಸಾಕ್ಷಿ ಅಗಿದೆ. ಆದರೆ, ಕೆಲವರು ಇದನ್ನು ಟ್ರೋಲ್ ಮಾಡಿದ್ದು ಇದೆ. ಇದಕ್ಕೆ ಅನುಶ್ರೀ ಖಡಕ್ ಉತ್ತರ ನೀಡಿದ್ದಾರೆ. ಪುನೀತ್ ಅವರನ್ನು ಅನುಶ್ರೀ ಆರಾಧಿಸುತ್ತಾರೆ. ಪುನೀತ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿದ ಅನೇಕರು ಅನುಶ್ರೀ ಅವರನ್ನು ಟೀಕೆ ಮಾಡಿದ್ದರು.

ಅವರದ್ದು ಮೊಸಳೆ ಕಣ್ಣೀರು, ಪುನೀತ್ ಹೆಸರಲ್ಲಿ ಅವರು ದುಡ್ಡು ಮಾಡುತ್ತಿದ್ದಾರೆ ಎಂದಿದ್ದರು. ಇದಕ್ಕೆ ಅನುಶ್ರೀ ಖಡಕ್ ಆಗಿ ಉತ್ತರ ನೀಡಿದ್ದಾರೆ. ‘ನೀವು ತುಂಬಾನೇ ಸ್ವೀಟ್. ನಿಮ್ಮಂತವರ ಅಭಿಮಾನಿ ಹೊಂದಲು ನಿಜಕ್ಕೂ ಖುಷಿ ಆಗುತ್ತದೆ. ದೇವರು ಒಳ್ಳೆಯದು ಮಾಡಲಿ’ ಎಂದು ಪುನೀತ್ ಅವರು ಅನುಶ್ರೀಗೆ ಹೇಳಿದ್ದರಂತೆ. ಇದರ ಸ್ಕ್ರೀನ್ ಶಾಟ್ ಅನ್ನು ಅನುಶ್ರೀ ತೋರಿಸಿದ್ದಾರೆ. ಆ ಬಳಿಕ ಮಾತನಾಡಿದ ಅವರು. ‘ನಾನು ಎಂತಹ ಫ್ಯಾನ್ ಅಂತ ಅವರಿಗೆ ಗೊತ್ತು. ಹೀಗಿರುವಾಗ ಇಂಥವರಿಗೆ ಯಾಕೆ ಉತ್ತರಿಸಬೇಕು. ಅನುಶ್ರೀ ಅವರು ಗಿಲ್ಲಿ ಸ್ಟೈಲ್ ಅಲ್ಲಿ ಹೇಳ್ತೀನಿ, ಜಸ್ಟ್ ಲೀವ್ ಇಟ್ ಎಂದಿದ್ದಾರೆ..

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.