2026-03-07 04:33:30

Another FIR on Bigg Boss Rajat | ಬಿಗ್ ಬಾಸ್ ರಜತ್ ಗೆ ಇದೆಲ್ಲ ಬೇಕಿತ್ತಾ ಬಿತ್ತು ಮತ್ತೊಂದು FIR | Speed News Kannada

Another FIR on Bigg Boss Rajat | ಬಿಗ್ ಬಾಸ್ ರಜತ್ ಗೆ ಇದೆಲ್ಲ ಬೇಕಿತ್ತಾ ಬಿತ್ತು ಮತ್ತೊಂದು FIR | Speed News Kannada

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಜನಪ್ರಿಯರಾದ ವ್ಯಕ್ತಿಗಳ ಹೆಸರುಗಳು ಬೇರೆ ಬೇರೆ ವಿವಾದಗಳಲ್ಲಿ ಕೇಳಿಬರುತ್ತಿರುವುದು ಸಾಮಾನ್ಯವಾಗಿದೆ. ಈಗ ಅದೇ ರೀತಿಯ ಒಂದು ಘಟನೆ ಬೆಳಕಿಗೆ ಬಂದಿದೆ. ಬಿಗ್ ಬಾಸ್ ಮೂಲಕ ಜನಪ್ರೀಯತೆ ಪಡೆದುಕೊಂಡಿರುವ ರಜತ್ ವಿರುದ್ಧ ಕೆ ಆರ್ ಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರತೀ ಬಾರಿಯೂ ಒಂದಲ್ಲ ಒಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುತ್ತಾ ಬಂದಿರುವ ರಜತ್ ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ಆಪ್ತ ಗಿರೀಶ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ ದಾಖಲಾಗಿದೆ. ಡಾಗ್ ಸತೀಶ್ ಜೊತೆ ಸ್ನೇಹ ಮಾಡಬಾರದು ಎಂದು ರಜತ್ ಅವರು ಬೆದರಿಕೆ ಹಾಕಿದ್ದಾರೆ. 
ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಅವರು ರಜತ್ ವಿರುದ್ಧ ದೂರು ನೀಡಿದ್ದಾರೆ. ರಜತ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಗಿರೀಶ್‌ ಆರೋಪಿಸಿದ್ದಾರೆ. ಇದರಿಂದಾಗಿ ರಜತ್ ಗೆ ಮತ್ತೆ ಸಂಕಷ್ಟ ಎದರಾಗಿದೆ.  ರಜತ್ ಅವರು ಕರೆ ಮಾಡಿ ಸರ್ ಇದು ರಜತ್ ಬುಜ್ಜಿ ಕಾಲ್ ಮಾಡುತ್ತಿದ್ದೇನೆ. ವಾಪಸ್ ಕಾಲ್ ಮಾಡ್ತೀರಾ ಇಲ್ಲ, ನಾವೇ ಒಳಗೆ ನುಗ್ಬೇಕಾ' ಎಂದು ಗಿರೀಶ್ ಕುಮಾರ್ ಅವರಿಗೆ ರಜತ್  ಅವರು ವಾಯ್ಸ್ ನೋಟ್ ಮೂಲಕ ಬೆದರಿಕೆ ಸಂದೇಶ ಕಳಿಸಿದ್ದಾರೆ. ಅಲ್ಲದೇ, ಕಾನ್ಫರೆನ್ಸ್ ಕಾಲ್‌ ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಹಾಗೂ ಕಿರಣ್ ವಿರುದ್ಧ ಬಿಎನ್ ಎಸ್ ಕಾಯ್ದೆ 351(2), 352 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ರಜತ್ ಈ ಹಿಂದೆ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು. ಅಲ್ಲದೇ ಮೈಸೂರಿನ ಪಾರಂಪರಿಕ ಕಟ್ಟಡ ಎದುರು ಸಿಗರೇಟ್‌ ಸೇದುತ್ತಾ ವಿಡಿಯೋ ಚಿತ್ರೀಕರಣ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. 
ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಪುರಂ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಸದ್ಯ ಕರೆಯಲ್ಲಿ ಮಾತನಾಡಿರೋದು ರಜತ್ ಅವರೇನಾ ಅಥವಾ ಬೇರೆ ವ್ಯಕ್ತಿನಾ ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ದೂರುದಾರ ಗಿರೀಶ್ ಕುಮಾರ್‌ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ರಜತ್ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಬೆದರಿಕೆ ಹಾಕಿರುವ ಆಡಿಯೋ, ಮೆಸೇಜ್ ಸ್ಕ್ರೀನ್‌ಶಾಟ್ ಸೇರಿದಂತೆ ಸೂಕ್ತ ದಾಖಲೆ ಹಾಗೂ ಸಾಕ್ಷ್ಯಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ. ದೂರುದಾರರು ನೀಡುವ ಸಾಕ್ಷ್ಯಗಳು ಹಾಗೂ ದಾಖಲೆಗಳನ್ನು ಆಧರಿಸಿ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ. ರಜತ್ ಅವರು ಯಾವ ಕಾರಣದ ಹಿನ್ನೆಲೆಯಲ್ಲಿ ಈ ಬೆದರಿಕೆ ಹಾಕಿದ್ದಾರೆ? ಇದರ ಹಿಂದಿನ ಅಸಲಿ ಕಾರಣವೇನು? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.