2026-04-23 07:53:47

Another big film announced by Hombale Films | ಹೊಂಬಾಳೆ ಫಿಲ್ಮ್ಸ್‌ನಿಂದ ಮತ್ತೊಂದು ಅದ್ಧೂರಿ ಚಿತ್ರ ಘೋಷಣೆ | Speed news kannada

Another big film announced by Hombale Films | ಹೊಂಬಾಳೆ ಫಿಲ್ಮ್ಸ್‌ನಿಂದ ಮತ್ತೊಂದು ಅದ್ಧೂರಿ ಚಿತ್ರ ಘೋಷಣೆ | Speed news kannada

ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಪರಶುರಾಮ ಜಯಂತಿಯ ವಿಶೇಷ ದಿನದಂದು ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರ *‘ಮಹಾವತಾರ ಪರಶುರಾಮ’* ವನ್ನು ಅಧಿಕೃತವಾಗಿ ಘೋಷಿಸಿದೆ.ʼರಾಜಕುಮಾರ’, ‘ಕೆಜಿಎಫ್’, ‘ಕಾಂತಾರ ‘ಸಲಾರ್’ ಹಾಗೂ ಇತ್ತೀಚೆಗೆ ಘೋಷಣೆಯಾದ ‘ಮಹಾವತಾರ ನರಸಿಂಹ’ದಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿರುವ ಹೊಂಬಾಳೆ ಫಿಲ್ಮ್ಸ್, ಈಗ ತನ್ನ ಯಶಸ್ಸಿನ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ.

ಈಗ ಅಶ್ವಿನ್ ಕುಮಾರ್ ಅವರ ನಿರ್ದೇಶನದಲ್ಲಿ ಹಾಗೂ ಕ್ಲೀಂ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಈ ಪೌರಾಣಿಕ ಕಥೆಯನ್ನು ತೆರೆಗೆ ತರುತ್ತಿದೆ. ಇದು ಹೊಂಬಾಳೆ ಫಿಲ್ಮ್ಸ್ ರೂಪಿಸಿರುವ ‘ಮಹಾವತಾರ ಸಿನಿಮಾಟಿಕ್ ಯುನಿವರ್ಸ್’ನ ಒಂದು ಪ್ರಮುಖ ಭಾಗವಾಗಿದ್ದು, ಅತ್ಯಾಧುನಿಕ ಅನಿಮ್ಯಾಟಿಕ್ ತಂತ್ರಜ್ಞಾನದ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ದೃಶ್ಯ ವೈಭವದಂತೆ ಉಣಬಡಿಸಲು ಸಜ್ಜಾಗಿದೆ. ಈ ಘೋಷಣೆಯು ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಜಯ ಸ್ಥಾಪಿಸುವ ಮುನ್ಸೂಚನೆ ನೀಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.