2026-04-23 06:56:03

Amidst the tension in Hormuz, humor flares up in the digital world|ಹೊರ್ಮುಜ್‌ನ ಉದ್ವಿಗ್ನತೆ ನಡುವೆ ಡಿಜಿಟಲ್ ಲೋಕದಲ್ಲಿ ಹಾಸ್ಯ ಚಟಾಕಿ|Speed News Kannada

Amidst the tension in Hormuz, humor flares up in the digital world|ಹೊರ್ಮುಜ್‌ನ ಉದ್ವಿಗ್ನತೆ ನಡುವೆ ಡಿಜಿಟಲ್ ಲೋಕದಲ್ಲಿ ಹಾಸ್ಯ ಚಟಾಕಿ|Speed News Kannada

ಯುದ್ಧ ಅಂದರೆ ಕೇವಲ ರಣರಂಗದಲ್ಲಿ ಶಸ್ತ್ರಾಸ್ತ್ರಗಳಿಂದ ನಡೆಯುವ ಹೋರಾಟ ಮಾತ್ರವಲ್ಲ, ಅದು ಈಗ ಡಿಜಿಟಲ್ ಲೋಕಕ್ಕೂ ಕಾಲಿಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆ, ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿ ಈಗ 'ಮೀಮ್'ಗಳ ಮೂಲಕ ಅಮೆರಿಕವನ್ನು ಕೆಣಕುತ್ತಿದೆ.ಇರಾನ್ ರಾಯಭಾರ ಕಚೇರಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ಗಳು.ಈಗ ಜಾಗತಿಕವಾಗಿ ವೈರಲ್ ಆಗುತ್ತಿವೆ.

ಹೊರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಮತ್ತು ಅಮೆರಿಕದ ಹಸ್ತಕ್ಷೇಪದ ಕುರಿತು ಇರಾನ್ ಅತ್ಯಂತ ವ್ಯಂಗ್ಯವಾಗಿ ಪೋಸ್ಟ್ ಮಾಡುತ್ತಿದೆ. ಇದು ರಾಜತಾಂತ್ರಿಕ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ಲಘು ಹಾಸ್ಯದ ಸಂವಹನ ಶೈಲಿಯಾಗಿದೆ.ಇತ್ತೀಚಿನ ಪೋಸ್ಟ್‌ನಲ್ಲಿ ಅಮೆರಿಕದ ಸೈನಿಕ ಮತ್ತು ಶಾರ್ಕ್ ಮೀನಿನ ಫೋಟೋ ಬಳಸಿ, "ನಾವು ಅವರಿಗೆ ಆಹಾರವಾಗಲ್ಲ" ಎಂದು ಇರಾನ್ ಲೇವಡಿ ಮಾಡಿದೆ. ಇದಕ್ಕೂ ಮುನ್ನ, ಇರಾನ್ ರಾಷ್ಟ್ರಧ್ವಜದ ಮುಂದೆ ಗಂಭೀರವಾಗಿ ನಿಂತಿರುವ ಸಿಂಹ ಮತ್ತು ಅಮೆರಿಕದ ಧ್ವಜದ ಮುಂದೆ ಬೊಗಳುವ ನಾಯಿಯ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಅಮೆರಿಕವನ್ನು ಕೆಣಕಿತ್ತು.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಮೂಲಸೌಕರ್ಯ ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ಭಾಷಣದ ಬೆನ್ನಲ್ಲೇ ಇರಾನ್ ರಾಯಭಾರ ಕಚೇರಿ ಈ ರೀತಿ ಸರಣಿ ಮೀಮ್‌ಗಳನ್ನು ಹಾಕುವ ಮೂಲಕ ಅಮೆರಿಕದ ಬೆದರಿಕೆಯನ್ನು ನಗುವಿನ ಮೂಲಕ ತಳ್ಳಿಹಾಕುತ್ತಿದೆ.ಒಟ್ಟಿನಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಈ 'ಮೀಮ್ ವಾರ್' ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಶಸ್ತ್ರ ಯುದ್ಧದ ಭೀತಿಯ ನಡುವೆ ಈ ಡಿಜಿಟಲ್ ಸಮರ ಎಲ್ಲಿಗೆ ಹೋಗಿ ತಲಪುತ್ತದೆ ಎಂಬುದನ್ನು ಕಾದು ನೋಡಬೇಕು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.