2026-06-08 01:30:31

Americas brutal strategy against Iran|ಇರಾನ್ ಮೇಲೆ ಅಮೆರಿಕದ ಭೀಕರ ಯುದ್ಧತಂತ್ರ|Speed News Kannada|

Americas brutal strategy against Iran|ಇರಾನ್ ಮೇಲೆ ಅಮೆರಿಕದ ಭೀಕರ ಯುದ್ಧತಂತ್ರ|Speed News Kannada|

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೇರಿದ್ದು, ಇರಾನ್ ವಿರುದ್ಧ ಭೂಸೇನೆಯನ್ನು ಬಳಸಲು ಟ್ರಂಪ್ ಆಡಳಿತ ಸಜ್ಜಾಗಿದೆ. ಕಳೆದ ಒಂದು ತಿಂಗಳ ವೈಮಾನಿಕ ದಾಳಿಗಳಿಗೆ ಇರಾನ್ ಬಗ್ಗದ ಹಿನ್ನೆಲೆಯಲ್ಲಿ, ಅಮೆರಿಕ ತನ್ನ ಮಿಲಿಟರಿ ಕಾರ್ಯತಂತ್ರವನ್ನು ಆಕ್ರಮಣಕಾರಿಯನ್ನಾಗಿ ಮಾಡಿದೆ. ಇದರ ಭಾಗವಾಗಿ ಸುಮಾರು 17 ಸಾವಿರ ಭೂಸೇನಾ ತುಕಡಿಗಳು ಅಧ್ಯಕ್ಷರ ಅಂತಿಮ ಅನುಮೋದನೆಗಾಗಿ ಕಾಯುತ್ತಿವೆ. ಅಲ್ಲದೆ, ಪೆಂಟಗನ್ ಹೆಚ್ಚುವರಿಯಾಗಿ 10 ಸಾವಿರ ಸೈನಿಕರು, 5,000 ಮೆರೈನ್ ಕಾರ್ಪ್ಸ್ ಮತ್ತು ಸಾವಿರಾರು ಪ್ಯಾರಾಟೂಪರ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ.

ಈ ಬೃಹತ್ ಕಾರ್ಯಾಚರಣೆಗಾಗಿ ಅಮೆರಿಕ ತನ್ನ ಅತ್ಯಾಧುನಿಕ ಯುದ್ಧನೌಕೆ ಯುಎಸ್‌ಎಸ್ ಟ್ರಿಪೋಲಿ ಯನ್ನು 3,500 ನೌಕಾಪಡೆಗಳೊಂದಿಗೆ ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ಎಫ್-35ಬಿ ಫೈಟರ್ ಜೆಟ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ನೌಕೆಯು ಹಾರ್ಮುಜ್ ಜಲಸಂಧಿ ಮತ್ತು ಖಾರ್ಗ್ ದ್ವೀಪದಂತಹ ಆಯಕಟ್ಟಿನ ಜಾಗಗಳ ಮೇಲೆ ಕಣ್ಣಿಟ್ಟಿದೆ. ವರದಿಗಳ ಪ್ರಕಾರ, ಆರಂಭಿಕ ಹಂತದಲ್ಲಿ ಇರಾನ್‌ನ ಪ್ರಮುಖ ದ್ವೀಪಗಳು ಮತ್ತು ಪರಮಾಣು ಕೇಂದ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು ಅಮೆರಿಕದ ಪ್ರಮುಖ ಗುರಿಯಾಗಿದೆ.

ಆದರೆ, ಇರಾನ್ ವಿರುದ್ಧದ ಭೂದಾಳಿಯು ಅಮೆರಿಕಕ್ಕೆ ಅಷ್ಟು ಸುಲಭವಾಗಿಲ್ಲ. ಇರಾನ್ ಸುಮಾರು 6 ಲಕ್ಷ ಸಕ್ರಿಯ ಯೋಧರು ಹಾಗೂ 1.90 ಲಕ್ಷ ಐಆರ್‌ಜಿಸಿ (IRGC) ಪಡೆಗಳನ್ನು ಹೊಂದಿದ್ದು, ಪ್ರಬಲ ಪ್ರತಿರೋಧ ಒಡ್ಡುವ ಸಾಧ್ಯತೆಯಿದೆ. ಈ ಅಪಾಯವನ್ನು ಅರಿತಿರುವ ಅಮೆರಿಕದ ಅಧಿಕಾರಿಗಳು ಸದ್ಯಕ್ಕೆ ತಮ್ಮ ಭೂಸೇನೆಯನ್ನು ಪರ್ಷಿಯನ್ ಕೊಲ್ಲಿಯ ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜಿಸುವ ಸಾಧ್ಯತೆಯಿದೆ. ತೈಲ ರಫ್ತು ಮಾರ್ಗಗಳ ಮೇಲೆ ಹಿಡಿತ ಸಾಧಿಸುವ ಮೂಲಕ ಇರಾನ್ ಮೇಲೆ ಒತ್ತಡ ಹೇರುವುದು ಈ ರಣತಂತ್ರದ ಮುಖ್ಯ ಉದ್ದೇಶವಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.