2026-06-08 06:59:55

American fighter jet crashes in Kuwait | ಕುವೈತ್‌ನಲ್ಲಿ ಅಮೆರಿಕದ ಯುದ್ಧವಿಮಾನ ಪತನ: ಆಕಾಶದಿಂದ ಧರೆಗುರುಳಿದ ಜೆಟ್ | Speed News Kannada

American fighter jet crashes in Kuwait | ಕುವೈತ್‌ನಲ್ಲಿ ಅಮೆರಿಕದ ಯುದ್ಧವಿಮಾನ ಪತನ: ಆಕಾಶದಿಂದ ಧರೆಗುರುಳಿದ ಜೆಟ್ | Speed News Kannada

ಇರಾನ್‌ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಭೀಕರ ಹತ್ಯೆಯ ನಂತರ ಇಂದು ಕುವೈತ್‌ನಲ್ಲಿ ಅಮೆರಿಕದ ಎಫ್‌-15 ಯುದ್ಧವಿಮಾನ ಪತನಗೊಂಡಿದೆ ಎಂದು ವರದಿಯಾಗಿದೆ. ಈ ಮೂಲಕ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಂತಾಗಿದೆ. 
ಕುವೈತ್‌ನಲ್ಲಿ ಎಫ್‌-15 ಯುದ್ಧವಿಮಾನವೊಂದು ಆಕಾಶದಿಂದ ಧರೆಗುರುಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಯುದ್ಧವಿಮಾನ ಯಾವ ದೇಶದ್ದು ಎಂಬ  ವಿವರ ಇನ್ನೂ ಬಹಿರಂಗವಾಗಿಲ್ಲವಾದರೂ, ವಿಮಾನ ಅಪಘಾತಕ್ಕೆ ಮುನ್ನ ಪೈಲಟ್ ವಿಮಾನದಿಂದ ಜಿಗಿದಿದ್ದಾರೆ ಎಂದು ತಿಳಿದು ಬಂದಿದೆ.
ಗಲ್ಫ್ ನಗರಗಳಾದ ರಿಯಾದ್‌, ದುಬೈ, ಅಬುಧಾಬಿ, ದೋಹಾ, ಮನಾಮದಲ್ಲಿ ಸೋಮವಾರವೂ ಪ್ರಬಲ ಸ್ಫೋಟಗಳು ಸಂಭವಿಸಿವೆ. ಅಮೆರಿಕ–ಇಸ್ರೇಲ್ ಜಂಟಿ ದಾಳಿಗೆ ಪ್ರತೀಕಾರವಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ಮೂರನೇ ದಿನವೂ ದಾಳಿ ಮುಂದುವರಿಸಿದೆ ಎಂದು ವರದಿಯಾಗಿದೆ.
ಇಂದು ಬೆಳಿಗ್ಗೆ ಹಲವು ಅಮೆರಿಕದ ಸೇನಾ ವಿಮಾನಗಳು ಅಪಘಾತಕ್ಕೀಡಾಗಿದ್ದು, ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಕುವೈತ್‌ನ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.