2026-06-08 01:31:21

America is saying it is impossible to protect its citizens in Israel | ಇಸ್ರೇಲ್‌ನಲ್ಲಿನ ತನ್ನ ಪ್ರಜೆಗಳ ರಕ್ಷಣೆ ಅಸಾಧ್ಯ ಎನ್ನುತ್ತಿದೆ ಅಮೆರಿಕ ಏಕೆ | Speed News Kannada

America is saying it is impossible to protect its citizens in Israel | ಇಸ್ರೇಲ್‌ನಲ್ಲಿನ ತನ್ನ ಪ್ರಜೆಗಳ ರಕ್ಷಣೆ ಅಸಾಧ್ಯ ಎನ್ನುತ್ತಿದೆ ಅಮೆರಿಕ ಏಕೆ | Speed News Kannada

ಬೆಂಗಳೂರು: ಇಸ್ರೇಲ್– ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಕಳೆದ ಮೂರು ದಿನಗಳಿಂದ ದಾಳಿ ನಡೆಸುತ್ತಲೇ ಇದೆ. ಪ್ರತಿಯಾಗಿ ಇರಾನ್‌ ಸಹ ತಕ್ಕ ಎದಿರೇಟು ನೀಡುತ್ತಲೇ ಇದೆ. ಈ ಮಧ್ಯೆ ಇಸ್ರೇಲ್‌ ನಲ್ಲಿರುವ ಅಮೆರಿಕ ನಾಗರಿಕರು ಜೀವಭಯ ಎದುರಿಸುತ್ತಿದ್ದಾರೆ. ಇವರನ್ನು ರಕ್ಷಣೆ ಅಸಾಧ್ಯ ಎಂಬ ಅಭಿಪ್ರಾಯ ಅಮೆರಿಕ ಕಡೆಯಿಂದಲೇ ಹೊರಬೀಳುತ್ತಿವೆ.
ಇಸ್ರೇಲ್‌ನಲ್ಲಿರುವ ಅಮೆರಿಕದ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಯಶಸ್ಸು ಕಾಣುತ್ತೇವೆ ಎಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ. ಯಾವುದೇ ಬೆಲೆ ತೆತ್ತಾದರೂ ಅಮೆರಿಕಕ್ಕೆ ಮರಳುತ್ತೇವೆ ಎನ್ನುವರಿಗೆ ಕೆಲವು ಸೌಲಭ್ಯಗಳು ಲಭ್ಯ ಎಂದು ಇಸ್ರೇಲ್‌ನ ಜೆರುಸಲೇಂನಲ್ಲಿನ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
ಅಮೆರಿಕ ರಾಯಭಾರ ಕಚೇರಿ ತನ್ನ ಕೆಲವು ನಾಗರಿಕರಿಗೆ ಕಳಿಸಿರುವ ಮೇಲ್‌ ಹಾಗೂ ಟ್ವೀಟ್‌ಗಳಲ್ಲಿ ಇದು ಬಹಿರಂಗವಾಗಿದೆ. ಇಸ್ರೇಲ್‌ನಲ್ಲಿರುವ ತನ್ನ ನಾಗರಿಕರ ಸುರಕ್ಷತೆಗೆ ನಾವು ಯಾವುದೇ ಗ್ಯಾರಂಟಿ ಕೊಡುವುದಿಲ್ಲ ಎನ್ನುವ ಅರ್ಥದಲ್ಲಿ ನಡೆದುಕೊಂಡಿರುವುದು ಯುದ್ಧ ಮುಂದುವರೆಯುವ ಸಾಧ್ಯತೆಗಳನ್ನು ಸೂಚಿಸುತ್ತದೆ.
ಇನ್ನೊಂದೆಡೆ ಇರಾನ್‌ ಒಳಗೆ ಅಮೆರಿಕದ ಸೇನಾಪಡೆ ನುಗ್ಗಿಸುವುದನ್ನು ಅಲ್ಲಗಳೆಯುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಇದೂ ಕೂಡ ಯುದ್ಧ ಮುಂದುವರೆಯುವ ಸಾಧ್ಯತೆಗಳನ್ನು ತೋರಿಸುತ್ತದೆ.
ವಿವಿಧ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಟ್ರಂಪ್‌, ಅಗತ್ಯವಿದ್ದರೆ  ಭೂಸೇನೆ ನಿಯೋಜಿಸಲು ಹಿಂಜರಿಯುವುದಿಲ್ಲ. ಇರಾನ್‌ ಮೇಲಿನ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಹೇಳಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.