ಮಧ್ಯಪ್ರಾಚ್ಯದಲ್ಲಿ ಯುದ್ಧ ಮಹತ್ವದ ಪಾತ್ರವನ್ನು ಪಡೆಯುತ್ತಿದೆ. ಅಮೆರಿಕ, ಇರಾನ್ ನಡುವೆ ಉದ್ವಿಗ್ನತೆಯನ್ನು ನಿಲ್ಲಿಸಲು ಕದನ ವಿರಾಮಕ್ಕೆ ಮುಂದಾಗಿತ್ತು. ಈ ವಿಚಾರ ಕುರಿತಾಗಿ ಶಾಂತಿ ಸಂದಾನಕ್ಕೆ ಅಮೆರಿಕ ಪಾಕಿಸ್ತಾನವನ್ನು ಮಧ್ಯಸ್ಥಿಕೆ ವಹಿಸಿತ್ತು. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 15 ಅಂಶಗಳ ಶಾಂತಿ ಸೂತ್ರವನ್ನು ಇರಾನ್ ಮುಂದೆ ಇಟ್ಟಿದೆ.
ಪಾಕಿಸ್ತಾನವು ಈ ಪ್ರಕ್ರಿಯೆಯಲ್ಲಿ ಕೇವಲ ಸಂದೇಶ ಸಾಗಿಸುವ ಪಾತ್ರವಷ್ಟೇ ಅಲ್ಲದೆ, ಅಮೆರಿಕ ಮತ್ತು ಇರಾನ್ ನಡುವಿನ ನೇರ ಮಾತುಕತೆಗಳಿಗೆ ಆತಿಥ್ಯ ವಹಿಸಲು ಸಹ ಮುಂದಾಗಿದೆ ಎಂದು ತಿಳಿದುಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ 15 ಶಾಂತಿ ಸೂತ್ರಗಳನ್ನು ಬಹಿರಂಗ ಪಡಿಸಿಲ್ಲವಾದರೂ, ಇದು ಬಹುಮಟ್ಟಿಗೆ ಸೈನಿಕ, ಆರ್ಥಿಕ ಮತ್ತು ರಾಜತಾಂತ್ರಿಕ ಅಂಶಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇವೆಲ್ಲದರ ಮಧ್ಯೆ ಹೊರ್ಮುಜ್ ಜಲಸಂಧಿಯನ್ನು ತೆರೆದ ಇರಾನ್ ಕೇವಲ ಮಿತ್ರರಾಷ್ಟ್ರಗಳಿಗೆ ಅಷ್ಟೆ ಅವಕಾಶವನ್ನು ಕಲ್ಪಸಿದ್ದು ಅಮೆರಿಕ ಇಸ್ರೇಲ್ ರಾಷ್ಟ್ರಗಳಿಗೆ ನಿರ್ಬಂಧ ವಿಧಿಸಿದೆ. ಇದೇ ಕಾರಣಕ್ಕೆ ಅಮೆರಿಕ ಶಾಂತಿ ಒಪ್ಪಂದಕ್ಕೆ ಮುಂದಾಗಿತ್ತು ಎಂಬ ಕುತೂಹಲ ಮೂಡಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿದ 15 ಅಂಶಗಳ ಶಾಂತಿ ಸೂತ್ರಕ್ಕೆ ಇರಾನ್ ಒಪ್ಪಿಕೊಳ್ಳುತ್ತ ಎಂಬುದು ದೊಡ್ಡ ಪ್ರಶ್ನೆಯಾಗಿದೆ.