2026-06-08 01:26:57

Allu Arjun gifts his wife a car worth Rs 4 crore | ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ 4 ಕೋಟಿ ರೂ. ಮೌಲ್ಯದ ಕಾರು ಗಿಫ್ಟ್ ಕೊಟ್ಟ ಅಲ್ಲು ಅರ್ಜುನ್ | Speed News Kannada

Allu Arjun gifts his wife a car worth Rs 4 crore | ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ 4 ಕೋಟಿ ರೂ. ಮೌಲ್ಯದ ಕಾರು ಗಿಫ್ಟ್ ಕೊಟ್ಟ ಅಲ್ಲು ಅರ್ಜುನ್ | Speed News Kannada

ತೆಲುಗು ಚಿತ್ರರಂಗದ ಜನಪ್ರಿಯ ನಟ ಅಲ್ಲು ಅರ್ಜುನ್ ಕುಟುಂಬದಲ್ಲಿ ಇತ್ತೀಚೆಗೆ ನಡೆದ ವಿವಾಹ ಸಮಾರಂಭ ಭಾರೀ ಗಮನ ಸೆಳೆದಿದೆ. ಅವರ ಸಹೋದರ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರ ವಿವಾಹ ಸಮಾರಂಭ ಶುಕ್ರವಾರ (ಮಾರ್ಚ್ 05) ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ವಿವಾಹದಲ್ಲಿ ಮೆಗಾ ಕುಟುಂಬದ ಸದಸ್ಯರು, ಆಪ್ತರು, ಸ್ನೇಹಿತರು ಹಾಗೂ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಿದ್ದರು. ಮದುವೆಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದೇ ದಿನ ಮತ್ತೊಂದು ವಿಶೇಷ ಘಟನೆ ನಡೆಯಿತು. 2011ರಲ್ಲಿ ವಿವಾಹವಾದ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ತಮ್ಮ 15ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ತಮ್ಮ ಪತ್ನಿಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಉಡುಗೊರೆಯಾಗಿ ಮರ್ಸಿಡಿಸ್ AMG ಮಾದರಿಯ ಕಾರನ್ನು ಅಲ್ಲು ಅರ್ಜುನ್ ನೀಡಿದ್ದಾರೆ. ಈ ಕಾರಿನ ಮಾರುಕಟ್ಟೆ ಬೆಲೆ ಸುಮಾರು 4ರಿಂದ 5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಉಡುಗೊರೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.