ತೆಲುಗು ಚಿತ್ರರಂಗದ ಜನಪ್ರಿಯ ನಟ ಅಲ್ಲು ಅರ್ಜುನ್ ಕುಟುಂಬದಲ್ಲಿ ಇತ್ತೀಚೆಗೆ ನಡೆದ ವಿವಾಹ ಸಮಾರಂಭ ಭಾರೀ ಗಮನ ಸೆಳೆದಿದೆ. ಅವರ ಸಹೋದರ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರ ವಿವಾಹ ಸಮಾರಂಭ ಶುಕ್ರವಾರ (ಮಾರ್ಚ್ 05) ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ವಿವಾಹದಲ್ಲಿ ಮೆಗಾ ಕುಟುಂಬದ ಸದಸ್ಯರು, ಆಪ್ತರು, ಸ್ನೇಹಿತರು ಹಾಗೂ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಿದ್ದರು. ಮದುವೆಗೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಇದೇ ದಿನ ಮತ್ತೊಂದು ವಿಶೇಷ ಘಟನೆ ನಡೆಯಿತು. 2011ರಲ್ಲಿ ವಿವಾಹವಾದ ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ತಮ್ಮ 15ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ತಮ್ಮ ಪತ್ನಿಗೆ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಉಡುಗೊರೆಯಾಗಿ ಮರ್ಸಿಡಿಸ್ AMG ಮಾದರಿಯ ಕಾರನ್ನು ಅಲ್ಲು ಅರ್ಜುನ್ ನೀಡಿದ್ದಾರೆ. ಈ ಕಾರಿನ ಮಾರುಕಟ್ಟೆ ಬೆಲೆ ಸುಮಾರು 4ರಿಂದ 5 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಉಡುಗೊರೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.