2026-03-10 05:25:07

Aishwarya Rai danced to Salman Khans song | ಸಲ್ಮಾನ್ ಖಾನ್ ಹಾಡಿಗೆ ಐಶ್ವರ್ಯ ರೈ ಏನ್ ಮಾಡುದ್ರು ಗೊತ್ತಾ | Speed News Kannada

Aishwarya Rai danced to Salman Khans song | ಸಲ್ಮಾನ್ ಖಾನ್ ಹಾಡಿಗೆ ಐಶ್ವರ್ಯ ರೈ ಏನ್ ಮಾಡುದ್ರು ಗೊತ್ತಾ | Speed News Kannada

ಇತ್ತೀಚೆಗೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವೈರಲ್ ಆಗುತ್ತಿರುವ ದೃಶ್ಯದಲ್ಲಿ ಐಶ್ವರ್ಯಾ, 'ಸಲ್ಮನ್‌ ಖಾನ್ ಅಭಿನಯದ  ಇಶ್ಕ್' ಚಿತ್ರದ ಜನಪ್ರಿಯ ಟ್ರ್ಯಾಕ್ ಸಲಾಮ್-ಎ-ಇಶ್ಕ್' ಹಾಡಿಗೆ ಗೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಈ ಡ್ಯಾನ್ಸ್ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. 
ಸಾಮಾಜಿಕ ಜಾಲತಾಣಗಳಲ್ಲಿ ಸಿನಿ ತಾರೆಯರ ವೈಯಕ್ತಿಕ ಕ್ಷಣಗಳು ವೈರಲ್ ಆದಾಗ, ಅಭಿಮಾನಿಗಳಲ್ಲಿ ಕುತೂಹಲ ಕೂಡಾ ಹೆಚ್ಚಾಗುತ್ತದೆ. ಇತ್ತೀಚೆಗೆ ಅಂತಹ ಕೂತುಹಲ ಮೂಡಿಸಿದ್ದು ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರ ವೈರಲ್ ವಿಡಿಯೋ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಐಶ್ವರ್ಯ ರೈ ಸಲಾಮ್-ಎ-ಇಶ್ಕ್ ಹಾಡಿಗೆ ನೃತ್ಯ ಮಾಡುತ್ತಿರುವು ಈ ಹಾಡನ್ನು ಸಂಯೋಜಿಸಿರುವವರು ಶಂಕರ್-ಎಹ್ಸಾನ್-ಲೋಯ್, ಜೊತೆಗೆ ಸಮೀರ್ ಅಂಜಾನ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. 
ಇನ್ನೂ ಈ ವಿಶೇಷ ಸಂದರ್ಭದಲ್ಲಿ ಐಶ್ವರ್ಯಾ ನೀಲಿ ಬಣ್ಣದ ಸುಂದರವಾದ ಸೂಟ್ ಸೆಟ್ ಧರಿಸಿದ್ದರು. ಅದೇ ಸಂದರ್ಭದಲ್ಲಿ ಅಭಿಷೇಕ್ ಬಿಳಿ ಪ್ಯಾಂಟ್ ಹಾಗೂ ನೀಲಿ ಬಂಧಗಲಾ ಧರಿಸಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿದ್ದಾರೆ. ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಈ ಜೋಡಿ ಕುಣಿದು ಕುಪ್ಪಳಿಸುವುದನ್ನು ನಿವು ನೋಡಬಹುದು. 
ಇನ್ನೂ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಪ್ರಸಿದ್ಧ ಉದ್ಯಮಿ ಸಾನಿಯಾ ಚಾಂದೋಕ್ ಅವರ ವಿವಾಹವು ಮಾರ್ಚ್ 5, 2026 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ವಿವಾಹದಲ್ಲಿ ಅನೇಕ ಕ್ರೀಡೆ, ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಭಾಗವಹಿಸಿದ್ದರು. ಈ ಎಲ್ಲಾ ಸೆಲೆಬ್ರಿಟಿಗಳಲ್ಲಿ, ಎಲ್ಲರ ಗಮನ ಸೆಳೆದ ಪ್ರಮುಖ ಅಂಶವೆಂದರೆ ಐಶ್-ಅಭಿಷೇಕ್ ದಂಪತಿಗಳಾಗಿ . ಕಳೆದ ಕೆಲವು ತಿಂಗಳುಗಳಿಂದ, ಅಭಿಷೇಕ್ ಮತ್ತು ಐಶ್ವರ್ಯಾ ಬೇರ್ಪಡುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವದಂತಿಗಳು ಹರಡುತ್ತಿದ್ದವು. ವಿಶೇಷವಾಗಿ, ಐಶ್ವರ್ಯಾ ಅವರ 50 ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಬಚ್ಚನ್ ಕುಟುಂಬ ಗೈರುಹಾಜರಾಗಿರುವುದು ಈ ವದಂತಿಗಳಿಗೆ ಪುಷ್ಟಿ ನೀಡಿತ್ತು. 2007 ರಲ್ಲಿ ವಿವಾಹವಾದ ಈ ಜೋಡಿ ತಮ್ಮ ವಿಚ್ಛೇದನದ ವದಂತಿಗಳಿಗೆ ಒಮ್ಮೆಯೂ ಪ್ರತಿಕ್ರಿಯಿಸಿಲ್ಲ. ಆದರೆ ಅಭಿಷೇಕ್ ಹಾಗೂ ಐಶ್ವರ್ಯ ಅರ್ಜುನ್ ಮದುವೆಗೆ ದಂಪತಿಗಳಾಗಿ ಬರುವ ಮೂಲಕ ಎಲ್ಲರಿಗೂ ಶಾಕ್ ಕೋಟ್ಟಿದ್ದರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.