2026-06-28 03:56:44

Air quality worsens in major cities of the state|ರಾಜ್ಯದ ಪ್ರಮುಖ ನಗರಗಳಲ್ಲಿ ಹದಗೆಟ್ಟ ವಾಯುಗುಣಮಟ್ಟ|Speed News Kannada

Air quality worsens in major cities of the state|ರಾಜ್ಯದ ಪ್ರಮುಖ ನಗರಗಳಲ್ಲಿ ಹದಗೆಟ್ಟ ವಾಯುಗುಣಮಟ್ಟ|Speed News Kannada

ರಾಜ್ಯದ ಪ್ರಮುಖ ನಗರಗಳಲ್ಲಿ ಮತ್ತೆ ವಾಯು ಮಾಲಿನ್ಯ ಏರಿಕೆ ಕಂಡುಬಂದಿದೆ. ಕೆಲವು ದಿನಗಳಿಂದ ಸುಧಾರಣೆ ಕಂಡಿದ್ದ ಏರ್ ಕ್ವಾಲಿಟಿ ಇದೀಗ ಮತ್ತೆ ಕುಸಿದಿದೆ.ಇಂದು ಬಳ್ಳಾರಿಯಲ್ಲಿ AQI 158ಕ್ಕೆ ಏರಿಕೆಯಾಗಿದ್ದು, ಅತ್ಯಂತ ಕಳಪೆ ಮಟ್ಟ ತಲುಪಿದೆ. ಮಂಗಳೂರು 142 ಮತ್ತು ಉಡುಪಿ 133ಕ್ಕೆ ಏರಿಕೆಯಾಗಿದ್ದು, ಗಾಳಿ ಅನಾರೋಗ್ಯಕರ ಮಟ್ಟದಲ್ಲಿದೆ.

ಬೆಂಗಳೂರಿನಲ್ಲಿ AQI 131 ಆಗಿದ್ದು, ಸುಧಾರಣೆ ಕಂಡರೂ ಇನ್ನೂ ಆರೋಗ್ಯಕ್ಕೆ ಹಾನಿಕರವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮೈಸೂರು ಮತ್ತು ಕಲಬುರ್ಗಿಯಲ್ಲೂ AQI 121 ದಾಖಲಾಗಿದೆ. ಇನ್ನು ಶಿವಮೊಗ್ಗ 126, ಹುಬ್ಬಳ್ಳಿ 94, ವಿಜಯಪುರ 93 ಹಾಗೂ ಬೆಳಗಾವಿ 78 AQI ದಾಖಲಾಗಿದೆ. WHO ಮಾನದಂಡಗಳ ಪ್ರಕಾರ, ಈ ಮಟ್ಟದ ವಾಯು ಗುಣಮಟ್ಟ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.