2026-06-08 01:30:05

Afghanistan warns Pakistan | ನಿಮ್ ಹತ್ರ ಆಟಂ ಬಾಂಬಿದ್ರೆ ನಮ್ ಹತ್ರ ಆತ್ಮಹತ್ಯಾ ಬಾಂಬರ್‌ ಇದಾರೆ ಪಾಕಿಸ್ತಾನಕ್ಕೆ ಆಫ್ಘಾನಿಸ್ತಾನ ವಾರ್ನಿಂಗ್‌ | Speed News Kannada

Afghanistan warns Pakistan | ನಿಮ್ ಹತ್ರ ಆಟಂ ಬಾಂಬಿದ್ರೆ ನಮ್ ಹತ್ರ ಆತ್ಮಹತ್ಯಾ ಬಾಂಬರ್‌ ಇದಾರೆ ಪಾಕಿಸ್ತಾನಕ್ಕೆ ಆಫ್ಘಾನಿಸ್ತಾನ ವಾರ್ನಿಂಗ್‌ | Speed News Kannada

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಯುದ್ಧದಂತಹ ಪರಿಸ್ಥಿತಿಗಳು ಎದುರಾಗುತ್ತಿವೆ. ಈ ನಡುವೆ ಅಫ್ಘಾನಿಸ್ತಾನ ಪಾಕಿಸ್ತಾನಕ್ಕೆ ವಾರ್ನಿಂಗ್ ನೀಡಿದೆ. ತಾಲಿಬಾನ್ ಕಮಾಂಡರ್ ಒಬ್ಬರು ಅಫ್ಘಾನ್ ರಾಜ್ಯ ಟಿವಿಯಲ್ಲಿ ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದ್ದರೆ, ತಾಲಿಬಾನ್ "ಆತ್ಮಹತ್ಯಾ ಬಾಂಬರ್‌ಗಳ ಬೆಟಾಲಿಯನ್‌ಗಳನ್ನು ಹೊಂದಿದೆ ಎಂದು ಎಚ್ಚರಿಕೆ ನೀಡಿದೆ.
ಈ ನಡುವೆ ಗುರುವಾರ ರಾತ್ರಿ ಪಾಕಿಸ್ತಾನ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಕನಿಷ್ಠ 55 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ ನಂತರ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಫ್ಘಾನಿಸ್ತಾನದ ವಿರುದ್ಧ ಮುಕ್ತ ಯುದ್ಧ ಘೋಷಿಸಿದರು. ಸಿಂಧಿ ಹಾಡನ್ನು ಉಲ್ಲೇಖಿಸಿ "ಈಗ ಅದು ದಮಾ ದಮ್ ಮಸ್ತ್ ಕಲಂದರ್" ಎಂದು ಬರೆದಿದ್ದಾರೆ. "ನಾವು ನಿಮ್ಮ ನೆರೆಹೊರೆಯವರರು ನಿಮ್ಮನ್ನು ಏನು ಮಾಡಬೇಕು ಎಂದು ನಮಗೆಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 55 ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕಾಬೂಲ್ ಹೇಳಿದೆ. ಪಾಕಿಸ್ತಾನ ಕೂಡ ತರಾತುರಿಯಲ್ಲಿ ಮತ್ತೆ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಅಫ್ಘಾನ್ ಸೈನಿಕರ ದಾಳಿಯ ನಂತರ, ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾದಲ್ಲಿನ ತಾಲಿಬಾನ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ.
ಕೆಪಾಕಿಸ್ತಾನದ ಇತ್ತೀಚಿನ ವೈಮಾನಿಕ ದಾಳಿಗಳಿಗೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ದಾಳಿ ನಡೆಸುತ್ತಿರುವುದಾಗಿ ಅಫ್ಘಾನಿಸ್ತಾನ ಗುರುವಾರ ರಾತ್ರಿ ಹೇಳಿಕೊಂಡಿದೆ. ಅಫ್ಘಾನ್ ಅಧಿಕಾರಿಗಳ ಪ್ರಕಾರ, ಗಡಿ ಪ್ರದೇಶದಲ್ಲಿನ ಕಾರ್ಯಾಚರಣೆಯ ಸಂದರ್ಭದಲ್ಲಿ ಇದುವರೆಗೆ 15 ಶತ್ರು ನೆಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.  ಕಾರ್ಯಾಚರಣೆಯ ಸಮಯದಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಕೆಲವರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಉಪ ವಕ್ತಾರ ಹಮ್ಮುಲ್ಲಾ ಫಿತ್ರಾತ್ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಭಾನುವಾರ ಅಫ್ಘಾನ್ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗೆ ಪ್ರತಿಯಾಗಿ ಗುರುವಾರ ತಡರಾತ್ರಿ ತನ್ನ ಪಡೆಗಳು ಪಾಕಿಸ್ತಾನದ ಮೇಲೆ ಗಡಿಯಾಚೆಗಿನ ದಾಳಿ ನಡೆಸಿತ್ತು ಮತ್ತು ಒಂದು ಡಜನ್‌ಗೂ ಹೆಚ್ಚು ಪಾಕಿಸ್ತಾನಿ ಸೇನಾ ಠಾಣೆಗಳನ್ನು ವಶಪಡಿಸಿಕೊಂಡಿರುವುದಾಗಿ ಅಫ್ಘಾನಿಸ್ತಾನ ಹೇಳಿತ್ತು. ಫೆಬ್ರವರಿ 22 ರಂದು ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ಟಿಟಿಪಿ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು ಅಫ್ಘಾನಿಸ್ತಾನ ಪ್ರತೀಕಾರದ ಎಚ್ಚರಿಕೆ ನೀಡಿತು. ಗುರುವಾರ ತಡರಾತ್ರಿ ಅಫ್ಘಾನ್ ತಾಲಿಬಾನ್ ಪ್ರತಿದಾಳಿ ಆರಂಭಿಸಿತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.