2026-03-07 12:19:53

Actress Trishas post goes viral | ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ನಾನು ನಿನ್ನ ಬಿಟ್ಟು ಕೊಡಲ್ಲ ನಟಿ ತ್ರಿಷಾ ಪೋಸ್ಟ್ ವೈರಲ್ ಏನಿದರ ಅರ್ಥ | Speed News Kannada

Actress Trishas post goes viral | ಇಡೀ ಜಗತ್ತೇ ನಿನ್ನ ವಿರುದ್ಧ ನಿಂತರೂ ನಾನು ನಿನ್ನ ಬಿಟ್ಟು ಕೊಡಲ್ಲ ನಟಿ ತ್ರಿಷಾ ಪೋಸ್ಟ್ ವೈರಲ್ ಏನಿದರ ಅರ್ಥ | Speed News Kannada

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ಇತ್ತೀಚಿನ ಸಾಮಾಜಿಕ ಜಾಲತಾಣದ ಪೋಸ್ಟ್ ಭಾರೀ ವೈರಲ್ ಆಗಿದೆ. ಹೃದಯಸ್ಪರ್ಶಿ ಸಾಲುಗಳನ್ನು ಒಳಗೊಂಡಿರುವ ಈ ಸಂದೇಶ ನೆಟ್ಟಿಗರ ಗಮನ ಸೆಳೆದಿದ್ದು, ವಿವಿಧ ರೀತಿಯ ಅರ್ಥಗಳಿಗೆ ಎಡೆಮಾಡಿಕೊಟ್ಟಿದೆ. ಪೋಸ್ಟ್‌ನಲ್ಲಿ ನಟಿ ತ್ರಿಷಾ ಅವರು ವ್ಯಕ್ತಪಡಿಸಿರುವ ಭಾವನೆಗಳನ್ನು ಅಭಿಮಾನಿಗಳು ವಿಭಿನ್ನವಾಗಿ ವ್ಯಾಖ್ಯಾನಿಸುತ್ತಿದ್ದು ಕೆಲವರು ಇದನ್ನು ಅವರ ವೈಯಕ್ತಿಕ ಬದುಕಿನ ವಿಚಾರಗಳೊಂದಿಗೆ ಸಂಪರ್ಕಿಸುತ್ತಿದ್ದಾರೆ. ಆದರೆ, ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರ ನಡುವೆ, ಅಭಿಮಾನಿಗಳು ತ್ರಿಷಾ ಅವರ ಪೋಸ್ಟ್‌ಗೆ ಸಾವಿರಾರು ಕಾಮೆಂಟ್‌ಗಳು ಹಾಗೂ ಲೈಕ್‌ಗಳನ್ನು ನೀಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #Trisha ಎಂಬ ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗುತ್ತಿದೆ.
ಪೋಸ್ಟ್ ನಲ್ಲಿರುವುದು ಏನೇ ಆಗಲಿ, ಎಷ್ಟೇ ವಿರೋಧ ಎದುರಾಗಲಿ ನಾವು ಎದರಿಸೋಣ. ಒಂದು ವೇಳೆ ಇಡೀ ಜಗತ್ತು ನಿನ್ನ ವಿರುದ್ಧ ನಿಂತರೆ, ನಾನೆಂದಿಗೂ ನಿನ್ನನ್ನು ಬಿಟ್ಟುಕೊಡುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ತ್ರಿಷಾ ಅವರು ವಿಜಯ್ ಉದ್ದೇಶಿಸಿಯೇ ಈ ಮಾತನ್ನು ಹೇಳಿದ್ದಾರೆಂದು ಪೋಸ್ಟ್'ನ್ನು ವೈರಲ್ ಮಾಡಲಾಗುತ್ತಿದೆ. ಆದರೆ, ಈ ಸ್ಟೋರಿ ಅಸಲಿಯೋ? ನಕಲಿಯೋ? ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ. ಈ ನಡುವೆ ಕಳದ ವರ್ಷ ಮಾರ್ಚ್ 29 ರಂದು ನಟಿ ತ್ರಿಷಾ ಪ್ರೀತಿಯ ಬಗ್ಗೆ ಮಾಡಿದ್ದ ಇನ್ ಸ್ಟಾಗ್ರಾಂ ಪೋಸ್ಟ್ ಕೂಡ ಇದೀಗ ವೈರಲ್ ಆಗಿದೆ.
ಆ ಪೋಸ್ಟ್‌ನಲ್ಲಿ, ಪ್ರೀತಿ ಯಾವಾಗಲೂ ಗೆಲ್ಲುತ್ತದೆ ಎಂದು ಉಲ್ಲೇಖಿಸಿದ್ದ ತ್ರಿಷಾ, ವಧುವಿನ ಅಲಂಕಾರದಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿ "ಅಲೈಪಾಯುಡೆ" ಚಿತ್ರದ "ಸೀಕ್ರೆಟ್ ಫ್ರೆಂಡ್" ಹಾಡನ್ನು ಹಿನ್ನೆಲೆಯಲ್ಲಿ ಪ್ಲೇ ಮಾಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು, ಓಹ್.. ಆ ಸೀಕ್ರೆಟ್ ಫ್ರೆಂಡ್ ಯಾರೆಂದು ನನಗೆ ಈಗ ಅರ್ಥವಾಯಿತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಳೆಯ ಪೋಸ್ಟ್ ಅನ್ನು ಪ್ರಸ್ತುತ ಪರಿಸ್ಥಿತಿಗೆ ಹೋಲಿಸುತ್ತಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.