2026-04-23 09:36:18

Actress Tamannaah Bhatia suffers setback in Madras High Court | ನಟಿ ತಮನ್ನಾ ಭಾಟಿಯಾಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆ | Speed news kannada

Actress Tamannaah Bhatia suffers setback in Madras High Court | ನಟಿ ತಮನ್ನಾ ಭಾಟಿಯಾಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆ | Speed news kannada

ಖ್ಯಾತ ನಟಿ ತಮನ್ನಾ ಭಾಟಿಯಾ ಅವರಿಗೆ ಮದ್ರಾಸ್ ಹೈಕೋರ್ಟ್ನಲ್ಲಿ ದೊಡ್ಡ ಹಿನ್ನಡೆ ಎದುರಾಗಿದೆ. ಖಾಸಗಿ ಸೋಪ್ ಕಂಪನಿಯ ವಿರುದ್ಧ ಅವರು ಸಲ್ಲಿಸಿದ್ದ 1 ಕೋಟಿ ರೂಪಾಯಿ ಪರಿಹಾರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಅಕ್ಟೋಬರ್ 2008ರಲ್ಲಿ, ತಮನ್ನಾ ಸೋಪ್ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಒಪ್ಪಂದದ ಪ್ರಕಾರ, ಅವರು ಒಂದು ವರ್ಷದ ಅವಧಿಗೆ (ಅಕ್ಟೋಬರ್ 2009 ರವರೆಗೆ) ಕಂಪನಿಯ ಉತ್ಪನ್ನಗಳಿಗೆ ಬ್ರಾಂಡ್ ರಾಯಭಾರಿಯಾಗಿ ಕಾರ್ಯನಿರ್ವಹಿಸಬೇಕಾಗಿತ್ತು. ಒಪ್ಪಂದದ ಅವಧಿ ಮುಗಿದ ನಂತರವೂ, ಕಂಪನಿಯು ತನ್ನ ಫೋಟೋಗಳನ್ನು ಜಾಹೀರಾತುಗಳಲ್ಲಿ ಮತ್ತು ಸೋಪ್ ಪ್ಯಾಕೇಜಿಂಗ್‌ನಲ್ಲಿ ಬಳಸುತ್ತಿದೆ ಎಂದು ತಮನ್ನಾ ಆರೋಪಿಸಿದ್ದು, ನನಗೆ ಆರ್ಥಿಕವಾಗಿ ಹಾನಿಯಾಗಿದೆ ಮತ್ತು ಮಾರುಕಟ್ಟೆ ಮೌಲ್ಯವನ್ನು ಕಡಿಮೆ ಮಾಡಿದೆ ಎಂದು ಅವರು ವಾದಿಸಿದರು. 1 ಕೋಟಿ ರೂ. ಪರಿಹಾರವನ್ನು ಕೋರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು, ತಮನ್ನಾ ಅವರು ಒದಗಿಸಿದ ಸಾಕ್ಷ್ಯಗಳು ಸರಿಯಾಗಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು. ಏಪ್ರಿಲ್ 16, 2026ರಂದು, ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಪಿ. ವೇಲ್ಮುರುಗನ್ ಮತ್ತು ನ್ಯಾಯಮೂರ್ತಿ ಕೆ. ಗೋವಿಂದರಾಜನ್ ತಿಲಕಾವತಿ ಅವರ ಪೀಠವು ತಮನ್ನಾ ಅವರ ವಾದವನ್ನು ತಿರಸ್ಕರಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.