2026-03-07 12:23:56

Actress Sonu Gowda shares her feelings towards nature | ಪ್ರಕೃತಿ ಎದುರು ಮನದ ಇಂಗಿತ ಹಂಚಿಕೊಂಡ ನಟಿ ಸೋನು ಗೌಡ | Speed News Kannada

Actress Sonu Gowda shares her feelings towards nature | ಪ್ರಕೃತಿ ಎದುರು ಮನದ ಇಂಗಿತ ಹಂಚಿಕೊಂಡ ನಟಿ ಸೋನು ಗೌಡ | Speed News Kannada

ಕನ್ನಡದ ನಟಿ ಸೋನು ಗೌಡ ಅವರು ಕುಟುಂಬಸ್ಥರ ಜೊತೆ ಪ್ರವಾಸ ಕೈಗೊಂಡಿದ್ದು, ಸಹೋದರಿ ನೇಹಾ ಅವರ ಪುತ್ರಿ ಜೊತೆ ಆನಂದಿಸಿರುವ ಕ್ಷಣಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ನೇಹಾ ಅವರು ಹಂಚಿಕೊಂಡ ವಿಡಿಯೊಗೆ 'ಜಂಜಾಟದಿಂದ ದೂರಾಗಿ ಬೋಟ್‌ನಲ್ಲಿ ಕುಳಿತಿರುವಾಗ ತಲೆಯಲ್ಲಿ ಹತ್ತಾರು ಪ್ರಶ್ನೆಗಳು ಓಡುತ್ತಿದ್ದವು. ಈ ದಿನ ಪ್ರವಾಸ ಮಾತ್ರವಾಗಿರಲಿಲ್ಲ. ಬದಲಾಗಿ ನನ್ನ ಜೀವನದ ಕೆಲವು ಮಾತುಗಳು ಮುಖಾಮುಖಿಯಾಗುತ್ತಿದ್ದವು' ಎಂದು ಬರೆದುಕೊಂಡಿದ್ದಾರೆ.ಮಕ್ಕಳ ಜತೆ ಸೋನು ಗೌಡ
'ಒಪ್ಪಿಕೊಳ್ಳುವಿಕೆ ಗುಣ ಸುಲಭವಲ್ಲ. ನಮ್ಮ ಓಡಾಟ ನಿಲ್ಲಿಸಿ, ಸ್ವಲ್ಪ ಹೊತ್ತು ಸಮಾಧಾನದಿಂದ ಕುಳಿತು ಆಲಿಸಿದಾಗ ಮಾತ್ರ ನಮ್ಮೊಳಗಿನ ಅಂತರಂಗದ ಮಾತು ಕೇಳಿಸುತ್ತದೆ' ಎಂದು ತಿಳಿಸಿದ್ದಾರೆ. 'ಮಕ್ಕಳು ಸುಲಭವಾಗಿ ಪ್ರಕೃತಿಗೆ ಹೊಂದಿಕೊಳ್ಳುತ್ತಾರೆ. ಅವರಿಗೆ ನಿನ್ನೆಯ ಬಗ್ಗೆ ಕೊರಗಿರಲ್ಲ. ನಾಳೆಯ ಬಗ್ಗೆ ಚಿಂತೆ ಇರಲಿಲ್ಲ. ಆ ಕ್ಷಣವನ್ನು ಆನಂದಿಸುತ್ತಿದ್ದ ಮಕ್ಕಳಿಂದ ಮುಗ್ಧತೆಯನ್ನು ಕಲಿಯಬೇಕಿದೆ' ಎಂದು ಹೇಳಿಕೊಂಡಿದ್ದಾರೆ.
ಈ ಪ್ರವಾಸದ ಪ್ರಯಾಣದಲ್ಲಿ ನನಗೆ ಅರ್ಥವಾಗಿದ್ದು ಇಷ್ಟು ನಮ್ಮೊಳಗಿನ ಅಹಂಕಾರ, ಕೆಟ್ಟ ಆಲೋಚನೆಗಳನ್ನು ಮರೆತುಬಿಡಬೇಕು. ಮಕ್ಕಳ ನಿಷ್ಕಲ್ಮಶವಾದ ನಗುವನ್ನು ನಾವು ಕಲಿತು ಬದುಕು ಸಾಗಿಸಬೇಕು' ಎಂದು ಬರೆದುಕೊಂಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.