ಕನ್ನಡ ಸೇರಿದಂತೆ 80ನೇ ದಶಕದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು ನಟಿ ಮಾಧವಿ. ಇದೀಗ ತಮ್ಮ 30ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅಮೆರಿಕದಲ್ಲಿ ಅದ್ದೂರಿಯಾಗಿ ಸಂಪ್ರದಾಯಬದ್ಧವಾಗಿ ಆಚರಿಸಿದ್ದಾರೆ. ಹೆಸರಲ್ಲೇ ದೇವರ ಆರ್ಶೀವಾದ ಅವಳಿ ಮಕ್ಕಳ ಅದ್ಧೂರಿ ನಾಮಕರಣದಲ್ಲಿ ರಾಮ್ ಚರಣ್ ದಂಪತಿ.
ಭಾವೈಕ್ಯದ ಮದುವೆ: ಹಿಂದೂ ಹುಡುಗನಿಗೆ ಆಸರೆಯಾದ ಮುಸ್ಲಿಂ ದಂಪತಿ. ಸಾಮಾಜಿಕ ಮಾಧ್ಯಮದಲ್ಲಿ 30ನೇ ವಿವಾಹ ವಾರ್ಷಿಕೋತ್ಸವದ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ನಟಿ ಹಂಚಿಕೊಂಡ ವಿಡಿಯೊದಲ್ಲಿ ನಟಿ ಮಾಧವಿ ಹಾಗೂ ರಾಲ್ಫ್ ದಂಪತಿ ಕೈಗೆ ಮೆಹೆಂದಿ ಹಾಕಿ, ಮದುಮಗಳಂತೆ ರೆಡಿಯಾಗಿ ಪರಸ್ಪರ ಉಂಗುರ ಬದಲಾಯಿಸುವ ಮೂಲಕ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಜೊತೆಗೆ ಅವರ ಮೂವರು ಮುದ್ದಾದ ಹೆಣ್ಣು ಮಕ್ಕಳಾದ ಟಿಫಾನಿ, ಪ್ರಿಸ್ಸಿಲ್ಲಾ ಮತ್ತು ಎವೆಲಿನ್ ಭಾಗಿಯಾಗಿದ್ದರು.ಮಾಧವಿ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರ ಮನಸು ಗೆದ್ದಿದ್ದಾರೆ. ಇವರು ಡಾ. ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್, ಅಂಬರೀಷ್ ಸೇರಿದಂತೆ ಹಲವು ನಟರ ಜೊತೆ ನಟಿಸಿದ್ದಾರೆ. ಅಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ರಾಲ್ಸ್ ಶರ್ಮಾ ಎಂಬುವವರನ್ನು ಮದುವೆ ಆಗುವ ಮೂಲಕ ಚಿತ್ರರಂಗಕ್ಕೆ ವಿದಾಯ ಹೇಳಿದರು.