2026-03-07 05:31:26

Actress Amulyas husband Jagadish appointed as Bengaluru BJP Yuva Morcha president | ಬೆಂಗಳೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ನಟಿ ಅಮೂಲ್ಯ ಪತಿ ಜಗದೀಶ್ ನೇಮಕ | Speed News Kannada

Actress Amulyas husband Jagadish appointed as Bengaluru BJP Yuva Morcha president | ಬೆಂಗಳೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ನಟಿ ಅಮೂಲ್ಯ ಪತಿ ಜಗದೀಶ್ ನೇಮಕ | Speed News Kannada

ಬೆಂಗಳೂರು: ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಚುರುಕು ನೀಡುವ ಉದ್ದೇಶದಿಂದ ಬೆಂಗಳೂರು ಕೇಂದ್ರ ಜಿಲ್ಲೆಯಲ್ಲಿ ಬಿಜೆಪಿ ಹೊಸ ಅಧ್ಯಕ್ಷರನ್ನು ಘೋಷಿಸಿದೆ. ಜಿಲ್ಲಾಧ್ಯಕ್ಷ ಎ.ಆರ್. ಸಪ್ತಗಿರಿ ಗೌಡ ಅಧಿಕೃತ ಪ್ರಕಟಣೆ ಮೂಲಕ ವಿವಿಧ ಮೋರ್ಚಾಗಳ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ವಿಶೇಷ ಗಮನ ಸೆಳೆದಿದ್ದು ನಟಿ ಅಮೂಲ್ಯ ಅವರ ಪತಿ ಜಗದೀಶ್ ಆರ್. ಚಂದ್ರ ಅವರಿಗೆ ಯುವ ಮೋರ್ಚಾ ಅಧ್ಯಕ್ಷ ಸ್ಥಾನ ಲಭಿಸಿರುವುದು. ಇತ್ತೀಚಿನ ಅವಧಿಯಲ್ಲಿ ಪಕ್ಷದ ಸಂಘಟನಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಅವರು ಈಗ ಪ್ರಮುಖ ಜವಾಬ್ದಾರಿ ಹೊತ್ತಿದ್ದಾರೆ.
ಜಗದೀಶ್ ಅವರ ಕುಟುಂಬಕ್ಕೂ ರಾಜಕೀಯ ಹಿನ್ನೆಲೆ ಇದ್ದು, ಅವರ ಮಾವ ಜಿ.ಹೆಚ್. ರಾಮಚಂದ್ರ ಕೂಡ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಹೀಗಾಗಿ ಈ ನೇಮಕಾತಿ ಪಕ್ಷದ ವಿಶ್ವಾಸದ ಪ್ರತೀಕವೆಂದು ಹೇಳಲಾಗುತ್ತಿದೆ. ಇನ್ನು ಮಹಿಳಾ ಮೋರ್ಚಾ - ನೀತಾ ಎಂ.ಎನ್. ರೆಡ್ಡಿ, ಎಸ್.ಸಿ. ಮೋರ್ಚಾ - ಮುನಿಯಲ್ಲಪ್ಪ ಹಿಂದುಳಿದ ವರ್ಗಗಳ ಮೋರ್ಚಾ - ಹೆಚ್.ಆರ್. ಕೃಷ್ಣಪ್ಪ, ಎಸ್.ಟಿ. ಮೋರ್ಚಾ - ಗಿರೀಶ್ ಕುಮಾ‌ರ್ ಬಿ, ರೈತ ಮೋರ್ಚಾ - ರುದ್ರಪ್ಪ ವೈ ನೇಮಕ ಆಗಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಗಳು ಮಹತ್ವ ಪಡೆದಿವೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.