2026-03-07 04:34:02

Actor Yashs mother files complaint with SP | ಹಾಸನದ ಸೈಟ್‌ ಜಟಾಪಟಿ ಎಸ್ಪಿಗೆ ದೂರು ನೀಡಿದ ನಟ ಯಶ್ ತಾಯಿ | Speed News Kannada

Actor Yashs mother files complaint with SP | ಹಾಸನದ ಸೈಟ್‌ ಜಟಾಪಟಿ ಎಸ್ಪಿಗೆ ದೂರು ನೀಡಿದ ನಟ ಯಶ್ ತಾಯಿ | Speed News Kannada

ಹಾಸನ: ಜಿಲ್ಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅವರ ಸೈಟ್ ಮಾಲೀಕತ್ವದ ಜಟಾಪಟಿ ಮುಂದುವರೆದಿದೆ. ಇದೀಗ ಕೋರ್ಟ್ ಬಳಿಕ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ, ದೂರು ನೀಡಿದ್ದಾರೆ.
ಇಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರನ್ನು ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಭೇಟಿಯಾದರು.
ಪೊಲೀಸರು ಭೂ ಮಾಫಿಯಾದವರ ಜೊತೆಗೆ ಶಾಮೀಲಾಗಿದ್ದಾರೆ. ನನಗೆ ನ್ಯಾಯ ಕೊಡಿಸಲು ವಿಫಲರಾಗಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಸಿಟಿವಿ ದೃಶ್ಯಾವಳಿ ಸಹಿತ ದೂರು ನೀಡಿದರು.
ಅಂದಹಾಗೇ ಹಾಸನದ ವಿದ್ಯಾನಗರದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಅವರ ಮನೆ ಇದೆ. ಅವರು ಒತ್ತುವರಿ ಮಾಡಿಕೊಂಡು ಕಟ್ಟಿದ್ದಂತ ಕಾಂಪೌಂಡ್ ತೆರವಿಗೆ ಕೋರ್ಟ್ ಆದೇಶಿಸಿತ್ತು. ಹೀಗಾಗಿ ಮೂಲ ಮಾಲೀಕರು ಕಾಂಪೌಂಡ್ ಧ್ವಂಸಗೊಳಿಸಿದ್ದರು. ಆ ಬಳಿಕ ಕೋರ್ಟ್ ಪ್ರಕರಣಕ್ಕೆ ತಾತ್ಕಾಲಿಕ ತಡೆಯನ್ನು ನೀಡಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.