2026-07-23 09:12:30

Actor Bobby Deol gave all the money poor children | ಬಡ ಮಕ್ಕಳು ಪಕ್ಕ ಬಂದಾಗ ಕೈಯಲ್ಲಿದ್ದ ಹಣವೆಲ್ಲಾ ಬಾಚಿ ನೀಡಿದ ನಟ ಬಾಬ್ಬಿ ಡಿಯೋಲ್ | Speed News Kannada

Actor Bobby Deol gave all the money poor children | ಬಡ ಮಕ್ಕಳು ಪಕ್ಕ ಬಂದಾಗ ಕೈಯಲ್ಲಿದ್ದ ಹಣವೆಲ್ಲಾ ಬಾಚಿ ನೀಡಿದ ನಟ ಬಾಬ್ಬಿ ಡಿಯೋಲ್ | Speed News Kannada

ಮುಂಬೈ: ಬಾಲಿವುಡ್ ನಟ ಬಾಬ್ಬಿ ಡಿಯೋಲ್ ತಮ್ಮ ಬಳಿ ಇಬ್ಬರು ಬಡ ಮಕ್ಕಳು ಬಂದಾಗ ಕೈಯಲ್ಲಿದ್ದ ಹಣವೆಲ್ಲಾ ಬಾಚಿ ನೀಡಿ ಹೃದಯ ಶ್ರೀಮಂತಿಕೆ ಮೆರೆದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಬ್ಬಿ ಡಿಯೋಲ್ ಬಾಲಿವುಡ್ ನಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತೆರೆ ಮೇಲೆ ಖಡಕ್ ಪಾತ್ರದ ಮೂಲಕ ಮಿಂಚಿದರೂ ತೆರೆ ಹಿಂದೆ ತಾವೆಂಥಾ ಹೃದಯವಂತ ಎಂಬುದನ್ನು ಈ ವಿಡಿಯೋ ಮೂಲಕ ಸಾಬೀತುಪಡಿಸಿದ್ದಾರೆ.
ಬಾಬ್ಬಿ ಡಿಯೋಲ್ ಯಾವುದೋ ಖಾಸಗಿ ಕಾರ್ಯಕ್ರಮ ನಿಮಿತ್ತಬಂದಿದ್ದರು. ಇನ್ನೇನು ತಮ್ಮ ಕಾರಿನ ಬಳಿ ಹೋಗಬೇಕು ಎನ್ನುವಾಗ ಇಬ್ಬರು ಬಡ ಮಕ್ಕಳು ಅವರ ಬಳಿ ಬರುತ್ತಾರೆ. ಅವರನ್ನು ನೋಡಿ ಬಾಬ್ಬಿ ಡಿಯೋಲ್ ತಮ್ಮ ಜೇಬಿನಲ್ಲಿದ್ದ ನೋಟಿನ ಕಟ್ಟನ್ನು ಇಬ್ಬರೂ ಮಕ್ಕಳಿಗೆ ಹಿಂದೆ ಮುಂದೆ ನೋಡದೇ ಹಂಚಿದ್ದಾರೆ. ಅಷ್ಟೇ ಅಲ್ಲ ಆ ಮಕ್ಕಳನ್ನು ಸ್ವಲ್ಪವೂ ಹಿಂದೆ ಮುಂದೆ ನೋಡದೇ ತಬ್ಬಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಬಳಿಕ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಕಳುಹಿಸಿದ್ದಾರೆ. ಎಲ್ಲಾ ನಟರೂ ಇದೇ ರೀತಿ ಇರಬೇಕು ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.