2026-03-07 05:55:01

Accused arrested for allegedly defrauding people by pretending to be a HESCOM employee | ಹೆಸ್ಕಾಂ ಸಿಬ್ಬಂದಿ ಎಂದು ಹೇಳಿ ವಂಚನೆ ಖತರ್ನಾಕ್ ಆರೋಪಿ ಅರೆಸ್ಟ್ | Speed News Kannada

Accused arrested for allegedly defrauding people by pretending to be a HESCOM employee | ಹೆಸ್ಕಾಂ ಸಿಬ್ಬಂದಿ ಎಂದು ಹೇಳಿ ವಂಚನೆ ಖತರ್ನಾಕ್ ಆರೋಪಿ ಅರೆಸ್ಟ್ | Speed News Kannada

ವಿದ್ಯುತ್‌ ಬಿಲ್‌ ಕಲೆಕ್ಟರ್ ಎಂದು ಸುಳ್ಳು ಹೇಳಿ ಮನೆಮನೆಗೆ ತೆರಳಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಹುಬ್ಬಳ್ಳಿಯ ಆನಂದನಗರದಲ್ಲಿ ನಡೆದಿದೆ. ಆರೋಪಿಯು ಹೆಸ್ಕಾಂ ಸಿಬ್ಬಂದಿಯಂತೆ ಡ್ರೆಸ್ ಧರಿಸಿ, ತಾನೇ ವಿದ್ಯುತ್ ಬಿಲ್ ಕಲೆಕ್ಟರ್ ಎಂದು ಹೇಳಿ ಮನೆಮನೆಗೆ ತೆರಳಿ ಹಣ ಸಂಗ್ರಹಿಸುತ್ತಿದ್ದ. ಕರೆಂಟ್ ಬಿಲ್ ಹೆಸರಿನಲ್ಲಿ ಕೆಲವರಿಂದ 1 ಸಾವಿರದಿಂದ 2 ಸಾವಿರ ರೂಪಾಯಿ ವರೆಗೆ ಹಣ ವಸೂಲಿ ಮಾಡುತ್ತಿದ್ದನು.
ಆರೋಪಿಯು ಹಣ ಪಡೆದ ಬಳಿಕ ಜನ ರಸೀದಿ ಕೇಳಿದರೆ ಈಗ ಸರ್ವರ್ ಡೌನ್ ಇದೆ, ನಾಳೆ ತಂದು ಕೊಡುತ್ತೇನೆ ಎಂದು ಹೇಳಿ ಅಲ್ಲಿಂದ ಪರಾರಿಯಾಗುತ್ತಿದ್ದ. ಕೆಲವೆಡೆ ಹಣ ಪಡೆದು ರಶೀದಿ ಕೂಡ ನೀಡದಿದ್ದಾಗ ಸ್ಥಳೀಯರಿಗೆ ಅನುಮಾನ ಬಂದಿದೆ. ಅದು ಅಲ್ಲದೇ ಆರೋಪಿ ಕೇವಲ ಮಹಿಳೆಯರಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಇದರಿಂದ ಅನುಮಾನಗೊಂಡ ಸಾರ್ವಜನಿಕರು ಆರೋಪಿಯನ್ನು ಪ್ರಶ್ನಿಸಿ ವಿಚಾರಣೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ. ನಂತರ ತಕ್ಷಣವೇ ಪೊಲೀಸರಿಗೆ ಹಾಗೂ ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.