2026-06-08 04:44:36

Ab nhi ho rha hai..book a room right next to the house | Ab nhi ho rha hai..ಮನೆ ಪಕ್ಕದಲ್ಲೇ ರೂಮ್ ಬುಕ್ | Speed news kannada

Ab nhi ho rha hai..book a room right next to the house | Ab nhi ho rha hai..ಮನೆ ಪಕ್ಕದಲ್ಲೇ ರೂಮ್ ಬುಕ್ | Speed news kannada

ಬೆಂಗಳೂರಿನಲ್ಲಿ ಬೇಸಿಗೆ ಶುರುವಾಯ್ತು ಅಂದ್ರೆ ಸಾಕು, ನಮ್ಮ ಮೊದಲ ನೆನಪಾಗೋದೆ AC. ಬಿಸಿಲು ಅತಿಯಾದಾಗ ಫ್ಯಾನ್ ಗಾಳಿ ಕೂಡ ಬಿಸಿಬಿಸಿಯಾಗಿ ಬರುತ್ತದೆ. ಇದೇ ಪರಿಸ್ಥಿತಿಯನ್ನು ನೋಡಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಪ್ರಿಯಾ ಪಾಲ್ ಅವರು ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ AC ಇಲ್ಲದೆ ಈಗ ಸಾಧ್ಯವೇ ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಒಂದು ಸಾಲು ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಮನೆಯ ಪಕ್ಕದಲ್ಲೇ ಹೋಟೆಲ್ ರೂಮ್ ಬುಕ್ ಮಾಡಿದ್ದೇನೆ. ಇದು ಬೆಂಗಳೂರಲ್ಲಿ ಮಾತ್ರ ಸಾಧ್ಯ ಎಂದು ತಮ್ಮ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ. ಏಪ್ರಿಲ್-ಮೇ ಬಂತೆಂದರೆ ಸಾಕು, ತಾಪಮಾನ 38°C ದಾಟುತ್ತಿದೆ.

ಮನೆಯಿಂದ ಹೊರಗೆ ಕಾಲಿಟ್ಟರೆ ಬೆಂಕಿಯ ಉಂಡೆ ಮೇಲೆ ನಡೆದ ಅನುಭವ. ಮನೆಯೊಳಗೆ ಇದ್ದರೂ ಸೆಕೆ ತಾಳಲಾರದೆ ಜನ ಹೈರಾಣಾಗಿದ್ದಾರೆ. ಪ್ರಿಯಾ ಪಾಲ್ ಅವರ ಈ ಮಾತು ಈಗ ಪ್ರತಿಯೊಬ್ಬ ಮಧ್ಯಮ ವರ್ಗದ ಜನರ ನೋವಿಗೂ ಕನ್ನಡಿ ಹಿಡಿದಿದೆ. ಪ್ರಿಯಾ ಅವರ ಮಾತು ನಿಜವೇ ಇರಬಹುದು, ಆದರೆ ಎಲ್ಲರಿಗೂ ದಿನವಿಡೀ AC ಹಾಕಿಕೊಂಡು ಇರಲು ಸಾಧ್ಯವಿಲ್ಲ. ಕರೆಂಟ್ ಬಿಲ್ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಪ್ರಿಯಾ ಪಾಲ್ ಅವರ ಈ ಪೋಸ್ಟ್‍ಗೆ ಸಾವಿರಾರು ಜನ ಲೈಕ್ ಮಾಡಿದ್ದು, "ನಮಗೂ ಇದೇ ಕಷ್ಟ, AC ಹಾಕಿದ್ರೆ ಕರೆಂಟ್ ಬಿಲ್ ಮನೆಗೆ ಬೆಂಕಿ ಹಚ್ಚುತ್ತೆ," ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಬೇಸಿಗೆಯಲ್ಲಿ ಕೂಲ್ ಆಗಿರೋದು ಒಂದು ದೊಡ್ಡ ಸವಾಲೇ ಅಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.