2026-07-23 06:16:41

Aamir Khan gets emotional after watching his son movie|ಮಗನ ಸಿನಿಮಾ ನೋಡಿ ಭಾವುಕರಾದ ಆಮೀರ್ ಖಾನ್|Speed News Kannada

Aamir Khan gets emotional after watching his son movie|ಮಗನ ಸಿನಿಮಾ ನೋಡಿ ಭಾವುಕರಾದ ಆಮೀರ್ ಖಾನ್|Speed News Kannada

ಬಾಲಿವುಡ್‌ನ ಖ್ಯಾತ ನಟ ಆಮೀರ್ ಖಾನ್ ಅವರು ತಮ್ಮ ಮಗ ಜುನೈದ್ ಖಾನ್ ಅವರ ಮುಂಬರುವ ಸಿನಿಮಾ 'ಏಕ್ ದಿನ್' ನ ಪ್ರಚಾರ ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಏಕ್ ದಿನ್ ಕಿ ಮೆಹ್ಫಿಲ್’ ಕಾರ್ಯಕ್ರಮದಲ್ಲಿ ಚಿತ್ರದ ತುಣುಕೊಂದನ್ನು ವೀಕ್ಷಿಸುತ್ತಿದ್ದ ಆಮೀರ್ ಖಾನ್, ಮಗನ ಅಭಿನಯ ಮತ್ತು ಚಿತ್ರದ ಭಾವನಾತ್ಮಕಸನ್ನಿವೇಶಗಳನ್ನು ಕಂಡು ಭಾವುಕರಾದರು. ಅಳು ತಡೆಯಲಾಗದೆ ತಮ್ಮ ಶರ್ಟ್‌ನಿಂದ ಕಣ್ಣೀರು ಒರೆಸಿಕೊಂಡ ಆಮೀರ್ ಅವರನ್ನು ಪಕ್ಕದಲ್ಲೇ ಇದ್ದ ನಟಿ ಸಾಯಿ ಪಲ್ಲವಿ ಮತ್ತು ಜುನೈದ್ ಸಮಾಧಾನಪಡಿಸಿದರು.ಇದೇ ವೇಳೆ ಸಾಯಿ ಪಲ್ಲವಿ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಆಮೀರ್, "ಸಾಯಿ ಅದ್ಭುತವಾಗಿ ನಟಿಸಿದ್ದಾರೆ. ಸದ್ಯ ನಮ್ಮ ದೇಶದಲ್ಲಿರುವ ಅತ್ಯುತ್ತಮ ನಟಿಯರಲ್ಲಿ ಸಾಯಿ ಪಲ್ಲವಿ ಅಗ್ರಸ್ಥಾನದಲ್ಲಿದ್ದಾರೆ" ಎಂದು ಭೇಷ್ ಎಂದರು.

ಮಗ ಜುನೈದ್ ಖಾನ್ ಬಗ್ಗೆ ಮಾತನಾಡುತ್ತಾ, "ಜುನೈದ್ ಕೂಡ ಪರವಾಗಿಲ್ಲದಂತೆ ಕೆಲಸ ಮಾಡಿದ್ದಾನೆ. ಅವನು ನನ್ನ ಮಗನಾದ್ದರಿಂದ ನಾನು ಹೆಚ್ಚು ಹೊಗಳಲು ಸಾಧ್ಯವಿಲ್ಲ, ಆದರೆ ಚಿತ್ರದ ಎಲ್ಲಾ ಕಲಾವಿದರು ಅದ್ಭುತವಾಗಿ ಕೆಲಸ ಮಾಡಿದ್ದಾರೆ" ಎಂದು ತಮಾಷೆಯಾಗಿ ನುಡಿದರು.'ಏಕ್ ದಿನ್' 2016ರ ಜನಪ್ರಿಯ ಥಾಯ್ ಸಿನಿಮಾ 'ಒನ್ ಡೇ'ನ ಅಧಿಕೃತ ರಿಮೇಕ್ ಆಗಿದ್ದು, ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಜೋಡಿಯಾಗಿ ನಟಿಸಿದ್ದಾರೆ. ಸಾಯಿ ಪಲ್ಲವಿಯವರ ಚೊಚ್ಚಲ ಬಾಲಿವುಡ್ ಸಿನಿಮಾ ಇದಾಗಿದ್ದು, ಸುನಿಲ್ ಪಾಂಡೆ ನಿರ್ದೇಶಿಸಿದ್ದಾರೆ. ಮೇ 1ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.