2026-06-25 02:08:15

A young woman was hit by a bullet | ರಸ್ತೆ ದಾಟುತ್ತಿದ್ದ ಯುವತಿಗೆ ಬುಲೆಟ್‌ ಡಿಕ್ಕಿ ಅಸು ನೀಗಿದ ಎಚ್‌ ಡಿಎಫ್ ಸಿ ಉದ್ಯೋಗಿ | Speed News Kannada

A young woman was hit by a bullet | ರಸ್ತೆ ದಾಟುತ್ತಿದ್ದ ಯುವತಿಗೆ ಬುಲೆಟ್‌ ಡಿಕ್ಕಿ ಅಸು ನೀಗಿದ ಎಚ್‌ ಡಿಎಫ್ ಸಿ ಉದ್ಯೋಗಿ | Speed News Kannada

ಬೆಂಗಳೂರು: ಮಧ್ಯಾಹ್ನದ ಊಟಕ್ಕೆ ತೆರಳುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ರಸ್ತೆ ದಾಟುವಾಗ ಬೈಕ್ ಡಿಕ್ಕಿಯಾಗಿ ಅಸುನೀಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಹೆಚ್ ಡಿ ಎಫ್ ಸಿ ಬ್ಯಾಂಕ್ ಉದ್ಯೋಗಿ 27 ವರ್ಷದ ಯೋಗೇಶ್ವರಿ ಮೃತ ಯುವತಿ.
ಯೋಗೇಶ್ವರಿ ಅವರು ರಾಜಾಜಿನಗರದಲ್ಲಿ ಕಚೇರಿಯಿಂದ ಊಟಕ್ಕೆ ರಸ್ತೆ ದಾಟುತ್ತಿದ್ದರು. ಆಗ ವೇಗವಾಗಿ ಬಂದ ಬುಲೆಟ್‌ ಇವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಯೋಗೇಶ್ವರಿ ಅವರಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಸಮೀಪದ ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್ವರಿ ಮೃತಪಟ್ಟಿದ್ದಾರೆ. ರಾಜಾಜಿನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 
ಬೈಕ್ ಬರುವುದರೊಳಗೆ  ರಸ್ತೆ ದಾಟಬಹುದು ಎಂಬ ಉಮೇದಿನಿಂದ ಯೋಗೇಶ್ವರಿ ರಸ್ತೆ ದಾಟಿದ್ದರು. ಆದರೆ ಅವರ ಜತೆ ಇದ್ದ ಮತ್ತೊಬ್ಬ ಉದ್ಯೋಗಿ ರಸ್ತೆ ದಾಟಿರಲಿಲ್ಲ. ಬೈಕ್ ಸವಾರ ದೀಪನ್ ಗೂ ಗಾಯಗಳಾಗಿದ್ದು ಅವರನ್ನು ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.