2026-07-23 06:19:39

A surprising twist in Amrutadhare, the Deewan who shocked JD|ಅಮೃತಧಾರೆಯಲ್ಲಿ ಅಚ್ಚರಿ ತಿರುವು, ಜೆಡಿಗೆ ಶಾಕ್‌ ಕೊಟ್ಟ ದೀವಾನ್‌|Speed News Kannada

A surprising twist in Amrutadhare, the Deewan who shocked JD|ಅಮೃತಧಾರೆಯಲ್ಲಿ ಅಚ್ಚರಿ ತಿರುವು, ಜೆಡಿಗೆ ಶಾಕ್‌ ಕೊಟ್ಟ ದೀವಾನ್‌|Speed News Kannada

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ಯಲ್ಲಿ ಇದೀಗ ಹೈ-ವೋಲ್ಟೇಜ್ ಡ್ರಾಮಾ ನಡೆಯುತ್ತಿದೆ. ಸಾಲದ ಸುಳಿಯಲ್ಲಿ ಸಿಲುಕಿ ಕಂಪನಿ ಮಾರಿ ಪರಾರಿಯಾಗಲು ಪ್ಲ್ಯಾನ್ ಮಾಡಿದ್ದ ಜೆಡಿಗೆ, ಗೌತಮ್ ದೀವಾನ್ ಇದೀಗ ದೊಡ್ಡ ಶಾಕ್ ನೀಡಲು ಸಿದ್ಧನಾಗಿದ್ದಾನೆ.

ಜೆಡಿ ಬೆಟ್ಟಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿ ನೂರಾರು ಕೋಟಿ ಕಳೆದುಕೊಂಡಿದ್ದು, ಇದೀಗ ಆತ ಕಂಪನಿಯನ್ನು ಮಾರಾಟ ಮಾಡಲು ಮುಂದಾಗಿದ್ದಾನೆ. ಈ ಕಂಪನಿಯನ್ನು ಕೊಂಡುಕೊಳ್ಳಲು ಗೌತಮ್ ದೀವಾನ್ ಮುಂದಾಗಿರುವುದು ಕಥೆಯ ಕುತೂಹಲವನ್ನು ಹೆಚ್ಚಿಸಿದೆ. ವಿಶೇಷವೆಂದರೆ, ಈ ಸಾಹಸಕ್ಕೆ ಸಾಥ್ ನೀಡಲು ‘ಪಾರು’ ಧಾರಾವಾಹಿಯ ಅಖಿಲಾಂಡೇಶ್ವರಿ ಪಾತ್ರದಲ್ಲಿ ವಿನಯಾ ಪ್ರಸಾದ್ ಅವರು ರೀ-ಎಂಟ್ರಿ ನೀಡಿದ್ದಾರೆ.

ಒಂದೆಡೆ ಗೌತಮ್ ತನ್ನ ತಾಯಿಯನ್ನು ಸಾಲದ ಬಾಧೆಯಿಂದ ಮತ್ತು ಕಿಡ್ನಾಪ್‌ನಿಂದ ಪಾರು ಮಾಡುತ್ತಿದ್ದರೆ, ಇನ್ನೊಂದೆಡೆ ಅಖಿಲಾಂಡೇಶ್ವರಿಯ ನೆರವಿನೊಂದಿಗೆ ಬ್ಲ್ಯಾಂಕ್ ಚೆಕ್ ಹಿಡಿದು ಜೆಡಿಯ ಆಟಕ್ಕೆ ಬ್ರೇಕ್ ಹಾಕಲು ಹೊರಟಿದ್ದಾನೆ. ಶಕುಂತಲಳ ಬದಲಾವಣೆಯೊಂದಿಗೆ, ಗೌತಮ್ ದೀವಾನ್ ಮುಂದಿನ ನಡೆ ಏನು? ಜೆಡಿ ತನ್ನ ತಪ್ಪುಗಳಿಗೆ ತಕ್ಕ ಶಾಸ್ತಿ ಅನುಭವಿಸುತ್ತಾನೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಮುಂದಿನ ಸಂಚಿಕೆಗಳಲ್ಲಿ ಸಿಗಲಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.