2026-07-23 06:17:13

A surprising contestant on the reality show Sarigamapa|ಸರಿಗಮಪ ರಿಯಾಲಿಟಿ ಶೋನಲ್ಲಿ ಅಚ್ಚರಿ ಮೂಡಿಸಿದ ಸ್ಪರ್ಧಿ|Speed News Kannada

A surprising contestant on the reality show Sarigamapa|ಸರಿಗಮಪ ರಿಯಾಲಿಟಿ ಶೋನಲ್ಲಿ ಅಚ್ಚರಿ ಮೂಡಿಸಿದ ಸ್ಪರ್ಧಿ|Speed News Kannada

ಜನಪ್ರಿಯ ರಿಯಾಲಿಟಿ ಶೋ 'ಸರಿಗಮಪ' ಮತ್ತೊಮ್ಮೆ ತನ್ನ ಅದ್ಭುತ ಗಾಯಕರ ಮೂಲಕ ವೀಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಶೋನ ಆಡಿಷನ್ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ದೇಶದ ಮೂಲೆಮೂಲೆಗಳಿಂದ ಪ್ರತಿಭಾವಂತ ಗಾಯಕರು ಆಗಮಿಸುತ್ತಿದ್ದಾರೆ. ಈ ಪೈಕಿ ಅನುಷ್ಕಾ ಎಂಬ ಸ್ಪರ್ಧಿಯೊಬ್ಬರ ಗಾಯನ ಇದೀಗ ಎಲ್ಲರ ಹುಬ್ಬೇರಿಸಿದೆ.ವೇದಿಕೆಗೆ ಬಂದ ಅನುಷ್ಕಾ, ಸಾಮಾನ್ಯವಾಗಿ ಕನ್ನಡದ ವೇದಿಕೆಗಳಲ್ಲಿ ಕೇಳಲು ಸಿಗದ ಜರ್ಮನ್ ಒಪೆರಾ ಹಾಡನ್ನು ಪ್ರಸ್ತುತಪಡಿಸಿದ್ದಾರೆ. ಇವರ ಈ ಅಪರೂಪದ ಹಾಗೂ ಅದ್ಭುತ ಗಾಯನವನ್ನು ಕೇಳಿದ ಜಡ್ಜ್‌ಗಳು ಕ್ಷಣಕಾಲ ಮಂತ್ರಮುಗ್ಧರಾಗಿ ಶಾಕ್ ಆದರು. ಮುಖ್ಯವಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಸ್ಪರ್ಧಿಯ ಪ್ರತಿಭೆಗೆ ತಲೆಬಾಗುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.ಈ ವಿಶೇಷ ಕ್ಷಣದ ವಿಡಿಯೋವನ್ನು ಜೀ ಕನ್ನಡ ವಾಹಿನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೊಸ ಸೀಸನ್‌ನ ಆಡಿಷನ್‌ನಲ್ಲೇ ಇಂತಹ ಅದ್ಭುತ ಪ್ರತಿಭೆ ಹೊರಹೊಮ್ಮಿರುವುದು, ಮುಂದಿನ ದಿನಗಳಲ್ಲಿ ಶೋ ಮತ್ತಷ್ಟು ಕುತೂಹಲ ಮೂಡಿಸುವುದರಲ್ಲಿ ಸಂಶಯವಿಲ್ಲ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.