2026-06-08 04:10:06

A student who selled the mobile bike and paid the college fee | ಹಾಲ್ ಟಿಕೆಟ್ ಕೊಡಲ್ಲ ಎಂದ ಕಾಲೇಜ್ ಮೊಬೈಲ್ ಬೈಕ್ ಅಡವಿಟ್ಟು ಶುಲ್ಕ ಕಟ್ಟಿದ ವಿದ್ಯಾರ್ಥಿನಿ | Speed News Kannada

A student who selled the mobile bike and paid the college fee  | ಹಾಲ್ ಟಿಕೆಟ್ ಕೊಡಲ್ಲ ಎಂದ ಕಾಲೇಜ್ ಮೊಬೈಲ್ ಬೈಕ್ ಅಡವಿಟ್ಟು ಶುಲ್ಕ ಕಟ್ಟಿದ ವಿದ್ಯಾರ್ಥಿನಿ | Speed News Kannada

ಹಾವೇರಿ : ಹಾವೇರಿಯಲ್ಲಿ ಫೀಸ್ ಕಟ್ಟಿಲ್ಲ ಅನ್ನೋ ಕಾರಣಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ಹಾಲ್ ಟಿಕೆಟ್ ನೀಡಲು ಕಾಲೇಜು ನಿರಾಕರಿಸಿದ ಪ್ರಸಂಗ ನಡೆದಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಹಾಲ್ ಟಿಕೆಟ್ ನೀಡದೇ ಅವಳ ಪಾಲಕರ ಬೈಕ್ ಮತ್ತು ಮೊಬೈಲ್ ಗಳನ್ನು ಕಸಿದು ಇಟ್ಟುಕೊಂಡ ಆರೋಪ ಕೇಳಿಬಂದಿದೆ. ರಾಣೆಬೆನ್ನೂರಿನ BAJSS ಕಾಲೇಜು ಆವರಣದ ಡಿಬಿಎಸ್‌ ಮೆಡಿಕಲ್ ನೀಟ್ ಅಕಾಡೆಮಿ ಕಾಲೇಜಲ್ಲಿ ಶನಿವಾರ ಘಟನೆ ನಡೆದಿದೆ.
ಹಾಲ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಸಾರಾ ಜೆಸ್ಸಿಕಾ ಕಣ್ಣೀರಿಟ್ಟಿದ್ದಾಳೆ. ನಂತರ ಪಾಲಕರು ಕಾಲೇಜಿಗೆ ಬಂದು ಶಾಲಾ ಶುಲ್ಕ ಪಾವತಿಸುತ್ತಾರೆ ಹಾಲ್ ಟಿಕೆಟ್ ಕೊಡಿ ಎಂದಾಗ ಪಾಲಕರ ಬೈಕ್ ಅನ್ನೇ ಅಡವಿಟ್ಟುಕೊಂಡು ವಿದ್ಯಾರ್ಥಿನಿಗೆ ಹಾಲ್ ಟಿಕೆಟ್ ನೀಡಲಾಗಿದೆ.
ಕಾಲೇಜಿನಲ್ಲಿ ಸಾರಾ ಜೆಸ್ಸಿಕಾ ಪಿಯುಸಿ ವಿಜ್ಞಾನ ಭಾಗದಲ್ಲಿ ಓದುತ್ತಿದ್ದು ಪರೀಕ್ಷೆ ಹಾಲ್ ಟಿಕೆಟ್ ನೀಡಲು ಕಳೆದ ಒಂದು ವಾರದಿಂದ ಆಡಳಿತ ಮಂಡಳಿ ಸತಾಯಿಸಿದ್ದರು. ಮೊದಲ ಪರೀಕ್ಷೆ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ವಿಧ್ಯಾರ್ಥಿನಿ ಕಾಲೇಜಿಗೆ ಬಂದು, ವಿದ್ಯಾರ್ಥಿನಿಯ ಭವಿಷ್ಯ ಹಾಳಾಗಬಾರದು ಹಾಲ್ ಟಿಕೆಟ್ ಕೊಡಿ ಎಂದು ವಿದ್ಯಾರ್ಥಿನಿಯ ತಂದೆ ರಾಜು ಬೇಡಿಕೊಂಡಾಗ ಕಾಲೇಜು ಆಡಳಿತ ಮಂಡಳಿಯವರು ಬೈಕ್ ಹಾಗೂ ಮೊಬೈಲ್ ಅಡವಿಟ್ಟುಕೊಂಡಿದ್ದಾರೆ ಎನ್ನಲಾಗಿದೆ. 30 ಸಾವಿರ ಶುಲ್ಕಕ್ಕಾಗಿ ವಿದ್ಯಾರ್ಥಿನಿ ಕಣ್ಣಲ್ಲಿ ಕಣ್ಣೀರು ಹಾಕಿಸಿದ್ದಾರೆ. ಅಲ್ಲದೆ ಹಿಂದೆ ಈ ಕಾಲೇಜಿನಲ್ಲಿ ಕೆಲಸ ಮಾಡಿದ ಬೋಧಕ ಸಿಬ್ಬಂದಿಗೂ ವೇತನ ನೀಡಿಲ್ಲ ಎಂಬ ದೂರುಗಳು ಸಹ ಕಾಲೇಜಿನ ವಿರುದ್ಧ ಕೇಳಿ ಬಂದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.