2026-06-08 01:39:31

A lonely monkey in a Japanese zoo | ಜಪಾನ್ Zooನಲ್ಲಿ ಲೋನ್ಲಿ ಮಂಕಿ ಪಂಚ್ ಕಥೆ ಕೇಳಿ ಅಮ್ಮ ಬೇಡ ಅಂದ ಮರಿಗೆ ಆಟಿಕೆಯೇ ತಾಯಿ | Speed News Kannada

A lonely monkey in a Japanese zoo | ಜಪಾನ್ Zooನಲ್ಲಿ ಲೋನ್ಲಿ ಮಂಕಿ ಪಂಚ್ ಕಥೆ ಕೇಳಿ ಅಮ್ಮ ಬೇಡ ಅಂದ ಮರಿಗೆ ಆಟಿಕೆಯೇ ತಾಯಿ | Speed News Kannada

ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನ ಇಚಿಕಾವಾ ಸಿಟಿಯ Zooನಲ್ಲಿ ಜನಿಸಿದ ಸಣ್ಣ ಜಪಾನೀಸ್ ಮಕಾಕ್ ಕಪಿ "ಪಂಚ್" ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಕಥೆಯಾಗಿ ವೈರಲ್ ಆಗಿದೆ. ಮರಿ ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿ ತೊರೆದುಹೋದ ಕಾರಣ, ಕೇವಲ 500 ಗ್ರಾಂ ತೂಕದ ಈ ಕಪಿ ಮೃಗಾಲಯದ ಸಿಬ್ಬಂದಿ ಆರೈಕೆಯಲ್ಲಿ ಬೆಳೆದಿತ್ತು.ತಾಯಿಯ ಮಮತೆಯ ಕೊರತೆಯಿಂದ ಉಂಟಾದ ಒತ್ತಡವನ್ನು ಕಡಿಮೆ ಮಾಡಲು ಮೃಗಾಲಯದ ಸಿಬ್ಬಂದಿ ಮೃದುವಾದ ಆಟಿಕೆಗಳನ್ನು ನೀಡಿದರು. ಅವುಗಳಲ್ಲಿ ಒರಂಗುಟಾನ್ ಆಕಾರದ ಪ್ಲಷ್ ಆಟಿಕೆಗೆ ಪಂಚ್ ಗೆ ಅಮ್ಮನ ಅನುಭವ ನೀಡಿತ್ತು. ರಾತ್ರಿಯಲ್ಲೂ ಅದನ್ನೇ ಹಿಡಿದು ಮಲಗುತ್ತಿದ್ದ ದೃಶ್ಯಗಳು ಆನ್‌ಲೈನ್‌ನಲ್ಲಿ ಹರಿದಾಡಿದ್ದವು.
ಇದನ್ನೂ ಓದಿ:
ಇತ್ತೀಚೆಗೆ ಏಳು ತಿಂಗಳಾದ ಪಂಚ್ ನ್ನು ಮತ್ತೆ ಕಪಿಗಳ ಗುಂಪಿಗೆ ಪರಿಚಯಿಸಲಾಯಿತು. ಆರಂಭದಲ್ಲಿ ಸ್ವಲ್ಪ ಆತಂಕ ಕಂಡರೂ, ಈಗ ಅದು ಇತರ ಕಪಿಗಳೊಂದಿಗೆ ಬೆರೆತಿದೆ ಎಂದು ಹೇಳಲಾಗುತ್ತಿದೆ. ಒಮ್ಮೆ "ಲೋನಿ ಮಂಕಿ" ಎಂದೇ ಕರೆಯಲ್ಪಟ್ಟ ಪಂಚ್, ಈಗ ತನ್ನ ಹೊಸ ಕುಟುಂಬದಲ್ಲಿ ಸ್ಥಳ ಪಡೆಯುತ್ತಿರುವುದು ಪ್ರೇಕ್ಷಕರಿಗೆ ಮತ್ತೊಮ್ಮೆ ಖುಷಿ ತಂದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.